ಮನೋರಂಜನೆ

ಬಾಲಿವುಡ್ ನಟಿ ಜಾನ್ವಿ ಕಪೂರ್ ಮನೆಯಲ್ಲೂ ಇನ್ನಿಬ್ಬರಿಗೆ ಸೋಂಕು ದೃಢ!

Pinterest LinkedIn Tumblr


ಜನಸಾಮಾನ್ಯರು, ಸೆಲೆಬ್ರಿಟಿಗಳು ಎಂಬ ಯಾವ ಭೇದವೂ ಇಲ್ಲದೆ ಕೊರೊನಾ ವೈರಸ್‌ ಎಲ್ಲರಲ್ಲೂ ಭೀತಿ ಮೂಡಿಸಿದೆ. ವಿಶ್ವಾದ್ಯಂತ ಅನೇಕ ಸಿನಿಮಾ ಸೆಲೆಬ್ರಿಟಿಗಳು ಈ ಸೋಂಕಿಗೆ ಒಳಗಾಗಿದ್ದಾರೆ. ಶಾಕಿಂಗ್‌ ವಿಚಾರ ಏನೆಂದರೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಮನೆಯಲ್ಲೂ ಈಗ ನಡುಕ ಶುರುವಾಗಿದೆ.

ಕೆಲವೇ ದಿನಗಳ ಹಿಂದೆ ಜಾನ್ವಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವಕನಿಗೆ ಕೊರೊನಾ ವೈರಸ್ ಪಾಸಿಟಿವ್‌ ವರದಿ ಬಂದಿತ್ತು. ಆಗಲೇ ಕಪೂರ್‌ ಮನೆತನದಲ್ಲಿ ಭಯ ಹುಟ್ಟಿಕೊಂಡಿತ್ತು. ಈಗ ಶಾಕಿಂಗ್‌ ಬೆಳವಣಿಗೆ ಏನೆಂದರೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾತು ಕೇಳಿಬರುತ್ತಿದೆ.

ಮೊದಲ ಬಾರಿಗೆ ಮನೆ ಕೆಲಸದವನಿಗೆ ಕೊರೊನಾ ವೈರಸ್‌ ಇರುವುದು ಗೊತ್ತಾದಾಗ ಸೋಶಿಯಲ್‌ ಮೀಡಿಯಾದಲ್ಲಿ ಕಪೂರ್‌ ಕುಟುಂಬ ಮಾಹಿತಿ ನೀಡಿತ್ತು. ‘ನಾನು ಮತ್ತು ನನ್ನ ಮಕ್ಕಳು ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಆದೇಶದಂತೆ ನಾವು ನಡೆದುಕೊಳ್ಳುತ್ತಿದ್ದೇವೆ’ ಎಂದು ಬೋನಿ ಕಪೂರ್‌ ಹೇಳಿಕೆ ನೀಡಿದ್ದರು.

‘ನಾವೆಲ್ಲರೂ ಕ್ಷೇಮವಾಗಿದ್ದೇವೆ. ಲಾಕ್‌ಡೌನ್‌ ಆರಂಭ ಆದಾಗಿನಿಂದ ನಾವು ಮನೆಬಿಟ್ಟು ಹೊರಗೆ ಹೋಗಿಲ್ಲ. ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣಕ್ಕೆ ನಮಗೆ ಸ್ಪಂದಿಸಿದ್ದಾರೆ. ನಮ್ಮ ಮನೆ ಕೆಲಸದವನು ಕೂಡ ಬೇಗ ಗುಣಮುಖ ಆಗುತ್ತಾನೆ ಎಂಬ ಭರವಸೆ ಇದೆ’ ಎಂದು ಕಪೂರ್‌ ಕುಟುಂಬ ಹೇಳಿಕೊಂಡಿತ್ತು. ಆದರೆ ಅದರ ಬೆನ್ನಲ್ಲೆ ಇನ್ನಿಬ್ಬರಿಗೆ ವೈರಸ್‌ ತಗುಲಿರುವುದು ಆತಂಕ ಮೂಡಿಸಿದೆ.

ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್‌ ಅಮೆರಿಕದಲ್ಲಿ ವಿದ್ಯಾಭಾಸ ಮಾಡುತ್ತಿದ್ದರು. ಕೊರೊನಾ ವೈರಸ್‌ ಹಾವಳಿ ಶುರು ಆಗುತ್ತಿದ್ದಂತೆಯೇ ಅವರು ಎಚ್ಚೆತ್ತುಕೊಂಡರು. ಲಾಕ್‌ ಡೌನ್‌ ಆದೇಶ ಜಾರಿ ಆಗುವುದಕ್ಕೂ ಮುನ್ನವೇ ಅವರು ಭಾರತಕ್ಕೆ ಮರಳಿದರು.

Comments are closed.