ರಾಷ್ಟ್ರೀಯ

ಕ್ವಾರಂಟೈನ್ ಕೇಂದ್ರವೊಂದರಲ್ಲಿ ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ! ವಿಡಿಯೋ ವೈರಲ್

Pinterest LinkedIn Tumblr

ಪಾಟ್ನಾ: ಕೊರೋನಾ ಸೋಂಕು ಹರಡದಂತೆ ಕ್ವಾರಂಟೈನ್ ಮಾಡಲಾಗಿದ್ದ ಕೇಂದ್ರವೊಂದರಲ್ಲಿ ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ಮಾಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬಿಹಾರದ ಸಮಸ್ತಪುರ ಜಿಲ್ಲೆಯ ಮದ್ಯ ವಿದ್ಯಾಲಯದಲ್ಲಿ ಹಲವನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಗೆ ಹೊರಗಿನಿಂದ ಯುವತಿಯರನ್ನು ಕರೆತಂದು ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಲೆಯ ಆವರದಲ್ಲಿಯೇ ಈ ಡ್ಯಾನ್ಸ್ ಕಾರ್ಯಕ್ರಮ ನಡೆದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ, ಕ್ವಾರಂಟೈನ್ ಕೇಂದ್ರದಲ್ಲಿ ನಂಗಾನಾಚ್ ಕಾರ್ಯಕ್ರಮ ಆಯೋಜಿಸಿರುವ ಕುರಿತು ಮಾಹಿತಿ ಬಂದಿದೆ. ಕ್ವಾರಂಟೈನ್ ಕೇಂದ್ರಕ್ಕೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ನೀಡಿಲ್ಲ. ಕಾರ್ಯಕ್ರಮ ಆಯೋಜನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತದೆ ಇದೆ. ಕಳೆದ 24 ಗಂಟೆಯಲ್ಲೇ 5,611 ಮಂದಿಗೆ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 3,303ಕ್ಕೆ ಏರಿಕೆಯಾಗಿದೆ.

Comments are closed.