ಕರ್ನಾಟಕ

ಭಯ ಹುಟ್ಟಿಸುತ್ತಿರುವ ಕೊರೋನಾ ಸೋಂಕಿತ ಮೂಡಿಗೆರೆ ಸರಕಾರಿ ವೈದ್ಯನ ಟ್ರಾವೆಲ್ ಹಿಸ್ಟರಿ!

Pinterest LinkedIn Tumblr


ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ಗ್ರೀನ್‌ ಝೋನ್‌ ಆಗಿದ್ದ ಚಿಕ್ಕಮಗಳೂರು ಕೂಡ ವೈರಸ್ ಇರುವ ಜಿಲ್ಲೆಯಾಗಿ ಮಾರ್ಪಟ್ಟಿತು.

ಈಗ ಮೂಡಿಗೆರೆ ಸರಕಾರಿ ವೈದ್ಯನ ಟ್ರಾವೆಲ್ ಹಿಸ್ಟರಿ ಭಯ ಹುಟ್ಟಿಸುತ್ತಿದೆ. ಕಳೆದ 20 ದಿನದಲ್ಲಿ ಸೋಂಕಿತ ವೈದ್ಯ ಬೆಂಗಳೂರು, ಕೊಡಗಿಗೆ ಹೋಗಿ ಬಂದಿದ್ದಾರೆ. ಇಷ್ಟು ಮಾತ್ರವಲ್ಲ ಕಳೆದ 15 ದಿನದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಈ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಅಲ್ಲದೇ ಮೂಡಿಗೆರೆ ಪಟ್ಟಣದ ಹಲವರೊಂದಿಗೆ ಈ ವೈದ್ಯರು ನೇರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ವೈದ್ಯನ ಜೊತೆ ಕೆಲಸ ನಿರ್ವಹಿಸುತ್ತಿದ್ದ ನರ್ಸ್, ಆಶಾ ಕಾರ್ಯಕರ್ತೆಯರಿಗೂ ಈಗ ಕೊರೊನಾ ವೈರಸ್ ನಡುಕ ಶುರುವಾಗಿದೆ. ಇದರ ಜೊತೆಗೆ ವೈದ್ಯನ ಅಕ್ಕಪಕ್ಕದ ಮನೆಯವರು, ಆಪ್ತವಲಯದಲ್ಲಿ ಭೀತಿ ಹೆಚ್ಚಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗಾಗಲೇ ಅನೇಕರನ್ನು ಪರೀಕ್ಷೆಗೆ ಒಳಪಡಿಸಿದೆ.

ಸದ್ಯ ಜಿಲ್ಲೆಯಲ್ಲಿ 2 ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ. 43 ವರ್ಷದ ವೈದ್ಯ ಸೇರಿದಂತೆ 27 ವರ್ಷದ ಗರ್ಭಿಣಿಯಲ್ಲಿ ಕೋವಿಡ್‌ 19 ಸೋಂಕು ಕಾಣಿಸಿಕೊಂಡಿದೆ.

Comments are closed.