ರಾಷ್ಟ್ರೀಯ

ಮಹಾರಾಷ್ಟ್ರ; ಒಂದೇ ದಿನ 1,165 ಹೊಸ ಕೊರೋನಾ ಸೋಂಕು ಪ್ರಕರಣ ದಾಖಲು-ಸೋಂಕಿತರ ಸಂಖ್ಯೆ 20,228ಕ್ಕೆ ಏರಿಕೆ

Pinterest LinkedIn Tumblr

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಒಂದೇ ದಿನ 1,165 ಹೊಸ ಸೋಂಕು ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 20,228ಕ್ಕೆ ಏರಿಕೆಯಾಗಿದೆ.

ಶನಿವಾರ ಒಂದೇ ದಿನ ಕೊರೋನಾ ವೈರಸ್ ಗೆ 48 ಜನರು ಬಲಿಯಾಗಿದ್ದು, ಆ ಮೂಲಕ ವೈರಸ್ ಗೆ ಬಲಿಯಾದವರ ಸಂಖ್ಯೆ ಮಹಾರಾಷ್ಟ್ರದಲ್ಲಿ 779ಕ್ಕೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ರಾಜ್ಯವೊಂದರಲ್ಲಿ ಇಷ್ಟೊಂದು ಪ್ರಮಾಣದ ಮರಣಗಳಾಗಿದ್ದು ದಾಖಲೆಯಾಗಿದೆ. 9 ಮಂದಿ ಪುಣೆ, 8 ಜನರು ಮಲೆಗಾಂವ್ ನಲ್ಲಿ ಮೃತಪಟ್ಟಿದ್ದಾರೆ. ಇನ್ನು ಕೋವಿಡ್ -19ಗೆ ಮುಂಬೈ ಅಕ್ಷರಶಃ ನಲುಗಿ ಹೋಗಿದ್ದು, ಇಲ್ಲಿ ಸೋಂಕಿತರ ಪ್ರಮಾಣ 12,864ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಈ ನಗರವೊಂದರಲ್ಲೇ 489 ಜನರು ಕೊನೆಯುಸಿರೆಳೆದಿದ್ದಾರೆ. ಧಾರವಿಯಲ್ಲಿ ಮತ್ತೆ 25 ಹೊಸ ಪ್ರಕರಣಗಳು ದಾಖಲಾಗಿವೆ.ದ್ದು, ಇಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 833ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಒಟ್ಟಾರೆಯಾಗಿ 2,27,804 ಜನರಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, 3,800 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸುಮಾರು 2. 4 ಲಕ್ಷ ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, 13 ಸಾವಿರಕ್ಕಿಂತ ಹೆಚ್ಚು ಜನರನ್ನು ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಪಸರಿಸುತ್ತಿರುವ ಕೋವಿಡ್ 19 ಮಹಾಮಾರಿಯ ಬಗ್ಗೆ ಪ್ರತಿಕ್ರಿಯಿಸಿ “ಮುಂದಿನ ಲಾಕ್ ಡೌನ್ ಜನರ ವರ್ತನೆಯ ಮೇಲೆ ಅವಲಂಬಿಸಿರುತ್ತದೆ. ಜನರು ಲಾಕ್ ಡೌನ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಸರಿಸಿದರೆ ಅತೀ ಶೀಘ್ರದಲ್ಲಿ ತೆರವುಗೊಳಿಸಲಾಗುವುದು. ಲಾಕ್ ಡೌನ್ ನಲ್ಲೇ ಸಂಪೂರ್ಣ ಜೀವನ ಕಳೆಯಲಾಗುವುದಿಲ್ಲ. ಒಂದಲ್ಲಾ ಒಂದು ದಿನ ಸಡಿಲಗೊಳಿಸಲೇಬೇಕಾಗುತ್ತದೆ. ಅಲ್ಲಿಯವರೆಗೂ ನಿಯಮಗಳನ್ನು ಕಾಯ್ದುಕೋಂಡು ಸಾಮಾಜಿಕ ಅಂತರದತ್ತ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.

786 ಮಂದಿ ಪೊಲಿಸರಿಗೆ ವೈರಸ್
ಜನ ಸಾಮಾನ್ಯರು ಮಾತ್ರವಲ್ಲದೇ ಕೊರೋನಾ ಲಾಕ್ ಡೌನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಾರಾಷ್ಟ್ರದ 786 ಮಂದಿ ಪೊಲಿಸರಿಗೂ ಕೂಡ ಕೊರೋನಾ ವೈರಸ್ ಸೋಂಕು ಅಂಟಿದೆ. ಈ ಪೈಕಿ 703 ಆ್ಯಕ್ಟಿವ್ ಕೇಸ್ ಗಳಾಗಿದ್ದು, 76 ಮಂದಿ ಸೋಂಕಿತ ಪೊಲೀಸರು ಗುಣಮುಖರಾಗಿದ್ದಾರೆ. ಅಂತೆಯೇ 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ.

Comments are closed.