ಉಡುಪಿ: ಕೊರೋನಾ ವೈರಸ್ ರೋಗಗಳು (ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಲ್ಲಿಸಲು, ಉಡುಪಿ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳ0ತಹ ರೋಗಲಕ್ಷಣಗಳಿಗೆ ಪ್ಯಾರಸಿಟಮಲ್ ಆಧಾರಿತ ಔಷಧಿಗಳನ್ನು (ಪ್ರಿಸ್ಕಿಸ್ವಿವ್ ಮತ್ತು ಒಟಿಸಿ ಎರಡೂ) ವೈದ್ಯರ ಸಲಹಾ ಚೀಟಿಯಿಲ್ಲದೆ ಮಾರಾಟ ಮಾಡದಂತೆ ಸೂಚಿಸಲಾಗಿದೆ.

ಮುಂದುವರೆದು ವೈದ್ಯರ ಸಲಹಾ ಚೀಟಿ ಮೇರೆಗೆ ಮಾರಾಟ ಮಾಡಿದಲ್ಲಿ, ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ವಿವರಗಳನ್ನು https://pharma.karnataka.tech ವೆಬ್ ಅಪ್ಲಿಕೇಷನ್ ನಲ್ಲಿ ಅಪ್‌ಲೋಡ್ ಮಾಡುವಂತೆ, ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ಕೆ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.