ಕರಾವಳಿ

ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ: ದ.ಕ.ಜಿಲ್ಲೆಯಲ್ಲಿ ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ

Pinterest LinkedIn Tumblr

ಮಂಗಳೂರು, ಮೇ.03; ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ ಹೊರಬಿದ್ದಿದ್ದು, ದ.ಕ. ಜಿಲ್ಲೆಯಲ್ಲಿ ಕೂಡ ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ದ.ಕ. ಜಿಲ್ಲಾಡಳಿತವು ನಾಳೆಯಿಂದ ಮದ್ಯ ಮಾರಾಟಕ್ಕೆ ಷರತ್ತಿನ ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.

ಇದೇ ವೇಳೆ ಮದ್ಯ ಮಾರಾಟ ಮಳಿಗೆಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ವೈನ್ ಶಾಪ್ ಗಳಲ್ಲಿ ಮೂವರು ಮಾತ್ರ ಸಿಬಂದಿ ಇರಬೇಕು. ಮದ್ಯ ಮಳಿಗೆಯ ಒಳಗೆ ಐವರು, ಹೊರಗೆ ಐವರು ಗ್ರಾಹಕರಿಗೆ ಮಾತ್ರ ಅವಕಾಶ ನೀಡಬೇಕು, ಅಂಗಡಿ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಾವಲು ಹಾಕಬೇಕು, ಇಬ್ಬರು ಭದ್ರತಾ ಸಿಬಂದಿಗಳನ್ನು ಅಳವಡಿಸ ಬೇಕು, ಗ್ರಾಹಕರು, ಸಿಬಂದಿ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು, ಮಾತ್ರವಲ್ಲದೇ ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು ಎಂಬ ಷರತ್ತುಗಳನ್ನು ಮದ್ಯದಂಗಡಿ ಮಾಲಕರಿಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹಾಕಿದ್ದಾರೆ.

Comments are closed.