ಮಂಗಳೂರು : ಕೊರೋನಾ ಜಾಗೃತಿ ಕಾರ್ಯದಲ್ಲಿ ಪತ್ರಕರ್ತರೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರಿಗೂ ಕೋವಿಡ್ -19 ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕುವ ಅನಿವಾರ್ಯ ತೆಗೆ ನಾವು ತಲುಪಿದ್ದೇವೆ. ಇಂತಹ ಪರಿಸ್ಥಿತಿ ನಡುವೆಯೂ ಪತ್ರಕರ್ತರು ನಮ್ಮ ಜೊತೆಗೆ ಕೈಜೋಡಿಸಿರುವುದು ಅಭಿನಂದನೀಯ. ಆರೋಗ್ಯಾಧಿಕಾರಿ ಗಳೊಂದಿಗೆ ಮಾತನಾಡಿ ಎಲ್ಲೆಡೆ ಸಂಚಾರಿಸಿಕೋವಿಡ್ -19 ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಜಿಲ್ಲೆಯ ಪತ್ರಕರ್ತರನ್ನು ಉಚಿವಾಗಿ ಕೋವಿಡ್ -19 ತಪಾಸಣೆ ನಡೆಸಲು ಆಸ್ಪತ್ರೆಯನ್ನು ಗೊತ್ತುಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Comments are closed.