
ನವದೆಹಲಿ(ಏ.19): ಇಂದು ದೆಹಲಿಯಲ್ಲಿ ಒಂದೂವರೆ ತಿಂಗಳ ಮಗು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಕಾರಣದಿಂದಾಗಿ ನವಜಾತ ಶಿಶು ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ.
ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯಲ್ಲಿ ಮಗು ಕೊರೋನಾ ವೈರಸ್ಗೆ ಬಲಿಯಾಗಿದೆ. ಈ ಆಸ್ಪತ್ರೆ ಸೆಂಟರ್-ರನ್ ಲೇಡಿ ಹರ್ದಿಂಗೆ ಮೆಡಿಕಲ್ ಕಾಲೇಜಿಗೆ ಸೇರಿದ್ದಾಗಿದೆ.
ಅನಾರೋಗ್ಯ ಹಿನ್ನೆಲೆ, ಕೆಲವು ದಿನಗಳ ಹಿಂದೆ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ಮಗುವಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಮಗುವನ್ನು ಸಾರಿ(SARI) ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಆ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1893ಕ್ಕೆ ಏರಿಕೆಯಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ಈವರೆಗೆ ಕೊರೋನಾ ಸೋಂಕಿಗೆ 24-60 ವರ್ಷ ವಯೋಮಿತಿಯ 43 ಮಂದಿ ಬಲಿಯಾಗಿದ್ದಾರೆ. 50-60 ವರ್ಷದೊಳಗಿನ 9 ಮಂದಿ ಕೋವಿಡ್ -19ನಿಂದ ಸಾವನ್ನಪ್ಪಿದ್ದಾರೆ. 50 ವರ್ಷಕ್ಕಿಂತ ಕೆಳಗಿನ 10 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.