
ಪ್ರಪಂಚವನ್ನು ಆವರಿಸಿ ತಲ್ಲಣ ಸೃಷ್ಟಿಸಿದ ಈ ಮಹಾಮಾರಿಯನ್ನು ನಾಶಮಾಡಲು ಹೊಡೆದೋಡಿಸಬೇಕೆಂದರೆ ಮೊದಲು ಯಾರಿಗೆಲ್ಲ ಸೋಂಕಿದೆ ಎಂದು ಪತ್ತೆಹಚ್ಚಬೇಕು. ಸೋಂಕಿತರನ್ನು ಪತ್ತೆಹಚ್ಚಿದ ನಂತರ ಅದನ್ನು ನಿಯಂತ್ರಿಸುವುದು ಮುಂದಿನ ಹೆಜ್ಜೆ. ಭಾರತ ಹಿಂದೆಂದೂ ಕಂಡಿರದ ಭೀತಿಯಲ್ಲಿರುವಾಗ ಇದರಿಂದ ಆಚೆ ಬರಲು ಪ್ರತಿಕ್ಷಣ ಪ್ರಯತ್ನಿಸುತ್ತಿರುವ ಇಂತಹ ಹೀರೋಗಳ ಬಗ್ಗೆ ನಾವು ಮಾತನಾಡಲಿಲ್ಲವೆಂದರೆ ಅವರ ತ್ಯಾಗಕ್ಕೆ ಬೆಲೆ ಕೊಡದಂತೆ ಆಗುತ್ತದೆ.
ಕೋರೋನ ಹೀರೋ ಆಗಿರುವ ಇವರು ಮಾಡಿದ ಕೆಲಸ ಏನು ಗೊತ್ತಾ? ನಮ್ಮ ದೇಶಕ್ಕೆ ಬರಲ್ಲ ಅಂತ ಭಾವಿಸಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಬಂದ ಮಾರಿಯನ್ನು ನಾವು ಎದುರಿಸಬೇಕಾಗಿತ್ತು. ಆದರೆ ಯಾರಿಗೆ ಸೋಂಕು ಬಂದಿದೆಯೆಂದು ಪತ್ತೆಹಚ್ಚಲು ಶಂಕಿತರ ಸ್ಯಾಂಪಲ್ ಪಡೆದಮೇಲೆ ಪರೀಕ್ಷಿಸಲು 8 ಗಂಟೆ ಸಮಯವಾಗುತ್ತಿತ್ತು, ಇದು ತುಂಬಾ ದೀರ್ಘವಾದ ಸಮಯ. ಹೀಗಾದರೆ ಕಷ್ಟ ಅಂತ ಭಾವಿಸಿದ ಸರ್ಕಾರ ಮೈ ಲ್ಯಾಬ್ ಡಿಸ್ಕವರಿ ಎಂಬ ಸಂಸ್ಥೆಗೆ ಅನುಮತಿ ಕೊಟ್ಟು ಸೋಂಕನ್ನು ಅತಿ ವೇಗವಾಗಿ ಕಂಡು ಹಿಡಿಯಬಲ್ಲ ಟೆಸ್ಟಿಂಗ್ ಕಿಟ್ ಕಂಡು ಹಿಡಿಯುವಂತೆ ಹೇಳಿತು.
ಮೈ ಲ್ಯಾಬ್ ಡಿಸ್ಕವರಿ ಸಂಸ್ಥೆಯ ಸಂಶೋಧನಾ ಮುಖ್ಯಸ್ಥಿ ಮಿನಾಲೆ ಬೋಸ್ಲೆ ಯವರು ತುಂಬು ಗರ್ಭಿಣಿ.ಡೆಲಿವರಿಗೆ ದಿನಗಳನ್ನು ಎಣಿಸುತ್ತಿದ್ದರು. ಆದರೆ ದೇಶದ ಸ್ಥಿತಿಯನ್ನು ಕಂಡ ಇವರು ಮಾಡಿದ್ದೇನು ಗೊತ್ತಾ?
ಮೊದಲು ಟೆಸ್ಟಿಂಗ್ ಕಿಟ್ ಕಂಡುಹಿಡಿಯಬೇಕು ಆನಂತರ ಡೆಲಿವರಿ ಎಂಬ ನಿರ್ಧಾರಕ್ಕೆ ಬಂದರು. ತುಂಬು ಗರ್ಭಿಣಿಯಾಗಿದ್ದ ಮಿನಾಲೆ ಬೋಸ್ಲೆ ಅವರು ಹಗಲು ರಾತ್ರಿ ಅನ್ನದೆ ಹತ್ತು ಜನ ಸಂಶೋಧಕರ ಜೊತೆ ಕೆಲಸ ಮಾಡಿದರು. ಕೊನೆಗೂ ಮಿನಾಲೆ ಬೋಸ್ಲೆರವರ ಛಲಕ್ಕೆ ಜಯ ಸಿಕ್ಕಿತ್ತು. ಅತಿವೇಗ ಅಂದರೆ ಕೇವಲ ಎರಡೂವರೆ ಗಂಟೆಯಲ್ಲಿ ಸೋಂಕನ್ನು ಪತ್ತೆ ಹಚ್ಚಬಲ್ಲ ಟೆಸ್ಟಿಂಗ್ ಕಿಟ್ ಸಂಶೋಧನೆ ಮಾಡಿದರು. ಸಾಧನವನ್ನು ಕಂಡುಹಿಡಿದ ಮರುದಿನವೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ.
ಇವರು ಕಂಡುಹಿಡಿದ ಟೆಸ್ಟಿಂಗ್ ಕಿಟ್ ಅಂತಿಂಥ ಸಾಧನವಲ್ಲ,ಮಹಾಮಾರಿನ್ನು ಹೊಡೆದೋಡಿಸಲು ಪ್ರಯತ್ನ ಮಾಡುತ್ತಿರುವ ಭಾರತಕ್ಕೆ ದೊಡ್ಡ ಅಸ್ತ್ರ ಸಿಕ್ಕಂತೆ. ಮಿನಾಲೆ ಬೋಸ್ಲೆ ಅವರ ಕಿಟ್ ನಿಂದ ಒಬ್ಬನಿಗೆ ಸೋಂಕು ಇರುವಿಕೆಯನ್ನು ಪತ್ತೆಹಚ್ಚಲು ಕೇವಲ ಎರಡುವರೆ ಗಂಟೆ ಸಾಕು .ಸಾವಿರದ ಇನ್ನೂರು ರೂಪಾಯಿ ಬೆಲೆಬಾಳುವ ಈ ಟೆಸ್ಟ್ ಕಿಟ್ ನಿಂದ 100 ಸ್ಯಾಂಪಲ್ ಟೆಸ್ಟ್ ಮಾಡಬಹುದು. ಅಂದರೆ ಒಂದು ಟೆಸ್ಟಿಗೆ ತಗಲುವ ವೆಚ್ಚ ಕೇವಲ 12 ರೂಪಾಯಿ. ಸೂಪರ್ ಸಂಶೋಧನೆ ಅಲ್ಲವೇ. ಬೇಗ ಸೋಂಕನ್ನು ಪತ್ತೆ ಹಚ್ಚಿದರೆ ಬೇಗ ಅದನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಮಿನಾಲೆ ಭೋಸ್ಲೆ ಅವರ ಶ್ರಮ ಮತ್ತು ತ್ಯಾಗವನ್ನು ನಾವೆಂದೂ ಮರೆಯಬಾರದು. ಗರ್ಭಿಣಿಯಾಗಿರುವುದನ್ನು ಲೆಕ್ಕಿಸದೆ ಸಂಶೋಧನೆ ಮಾಡಿ ನಮ್ಮ ಕೈಗೆ ಟೆಸ್ಟಿಂಗ್ ಕಿಟ್ ಕೊಟ್ಟ ಇವರಿಗೆ ಕೃತಜ್ಞತೆ ಸಲ್ಲಿಸಲೇಬೇಕು.
Comments are closed.