
ನವದೆಹಲಿ: ವಿಶ್ವದ 190 ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಶತ್ರು ದೇಶ ಪಾಕಿಸ್ತಾನ ಕೂಡ ತಲೆಬಾಗಿದ್ದು, ಭಾರತದ ಈ ನಿರ್ಣಾಯಕ ಹೋರಾಟಕ್ಕೆ ‘ಪ್ರೌಡ್ ಆಫ್ ಯೂ’ ಎಂದು ಶ್ಲಾಘಿಸಿದೆ.
ಹೌದು.. ವಿಶ್ವಾದ್ಯಂತ ಸಾವಿರಾರು ಮಂದಿಯ ಮಾರಣ ಹೋಮ ನಡೆಸುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಗಳನ್ನು ಬಳಕೆ ಮಾಡಿಕೊಂಡು ವಿವಿಧ ದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದೆ. ಭಾರತದ ಕಾರ್ಯಕ್ಕೆ ದೊಡ್ಣಣ್ಣ ಅಮೆರಿಕ, ಚೀನಾ, ಇಂಗ್ಲೆಂಡ್, ರಷ್ಯಾ ಸೇರಿದಂತೆ ವಿವಿಧ ದೇಶಗಳು ಶ್ಲಾಘನೆ ವ್ಯಕ್ತಪಡಿಸಿ, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ಬಿದ್ದರೆ ಯಾವುದೇ ರೀತಿಯ ನೆರವು ನೀಡಲೂ ಸಿದ್ಧ ಎಂದು ಹೇಳಿವೆ.
ಇದೀಗ ಈ ಪಟ್ಟಿಗೆ ಭಾರತದ ಬದ್ಧ ಶತ್ರು ಪಾಕಿಸ್ತಾನ ಕೂಡ ಸೇರಿದ್ದು, ಏರ್ ಇಂಡಿಯಾ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿದೆ. ಏಪ್ರಿಲ್ 2ರಂದು ಭಾರತದಿಂದ ಕೊರೋನಾ ವೈರಸ್ ವೈದ್ಯಕೀಯ ಪರಿಕರಗಳನ್ನು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ನಿರಾಶ್ರಿತರಾಗಿದ್ದ ಕೆಲ ಯೂರೋಪಿಯನ್ ನಾಗರಿಕರನ್ನು ಹೊತ್ತು ಮುಂಬೈನಿಂದ ಜರ್ಮನಿಯ ಫ್ರಾಂಕ್ ಫರ್ಟ್ ನತ್ತ ಸಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಗಡಿ ತೆರೆದಿತ್ತು. ಪಾಕ್ ವಾಯುಗಡಿ ಮೂಲಕ ತೆರಳಿದರೆ ಕಡಿಮೆ ಸಮಯದ ಅಂತರದಲ್ಲಿ ಫ್ರಾಂಕ್ ಫರ್ಟ್ ಗೆ ತೆರಳಬಹುದು ಎಂದು ಭಾರತ ಈ ಸಂಬಂಧ ಪಾಕ್ ನೊಂದಿಗೆ ಮಾತುಕತೆ ನಡೆಸಿ ಅನುಮತಿ ಕೂಡ ಪಡೆದಿತ್ತು. ಅದರಂತೆ ಪಾಕ್ ವಾಯುಗಡಿ ಪ್ರವೇಶ ಮಾಡಿದ್ದ ಏರ್ ಇಂಡಿಯಾ ವಿಮಾನವನ್ನು ಸ್ವಾಗತಿಸಿದ ಪಾಕ್ ಏರ್ ಕಂಟ್ರೋಲರ್ ಅಧಿಕಾರಿಗಳು ಭಾರತದ ಪೈಲಟ್ ಗಳನ್ನು ಉದ್ದೇಶಿಸಿ, ಪಾಕ್ ವಾಯುಗಡಿಗೆ ಸ್ವಾಗತ. ಪ್ರಸ್ತುತ ಪಾಕ್ ವಾಯುಗಡಿಯಲ್ಲಿ ಚಲಿಸುತ್ತಿರುವುದು. ಏರ್ ಇಂಡಿಯಾ ವಿಮಾನವೇ ಎಂಬುದನ್ನು ಖಚಿತಪಡಿಸಿ ಎಂದು ಕೇಳಿದೆ. ಇದಕ್ಕೆ ಭಾರತದ ಪೈಲಟ್ ಗಳು ಹೌದು ಇದು ಏರ್ ಇಂಡಿಯಾ ವಿಮಾನ. ಫ್ರಾಂಕ್ ಫರ್ಟ್ ನತ್ತ ಸಾಗಿದೆ ಎಂದು ಹೇಳಿದ್ದಾರೆ.
ಏಪ್ರಿಲ್ ರಂದು ಮುಂಬೈನಿಂದ ಮಧ್ಯಾಹ್ನ 2.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ ಸಂಜೆ 5.00ಗಂಟೆ ವೇಳೆಗೆ ಪಾಕಿಸ್ತಾನದ ವಾಯುಗಡಿ ಪ್ರವೇಶ ಮಾಡಿತ್ತು. ಈ ವೇಳೆ ಪಾಕಿಸ್ತಾನದ ಏರ್ ಕಂಟ್ರೋಲರ್ ಭಾರತದ ವಿಮಾನವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ,. ಈ ವೇಳೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಆಗ ಫ್ರೀಕ್ವೆನ್ಸಿ ಬದಲಿಸಿ ಮತ್ತೆ ಸಂಪರ್ಕಿಸಿದ್ದಾರೆ. ಈ ವೇಳೆ ಸಂಪರ್ಕ ಸಾಧ್ಯವಾಗಿದ್ದು, ಭಾರತೀಯ ಪೈಲಟ್ ಗಳನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಎಟಿಸಿ ಅಧಿಕಾರಿಗಳು, ಅಸಲಾಂ ಮಾಲಿಕುಮ್, ಇದು ಕರಾಚಿ ಕಂಟ್ರೋಲ್, ಪಾಕ್ ವಾಯುಗಡಿಗೆ ಆಗಮಿಸಿದ ಭಾರತದ ಏರ್ ಇಂಡಿಯಾ ವಿಮಾನಕ್ಕೆ ನಾವು ಸ್ವಾಗತ ಕೋರುತ್ತೇವೆ. ದಯಮಾಡಿ ಪ್ರಸ್ತುತ ಪಾಕ್ ವಾಯುಗಡಿಯಲ್ಲಿ ಚಲಿಸುತ್ತಿರುವುದು. ಏರ್ ಇಂಡಿಯಾ ವಿಮಾನವೇ ಎಂಬುದನ್ನು ಖಚಿತಪಡಿಸಿ ಎಂದು ಕೇಳಿದೆ. ಇದಕ್ಕೆ ಭಾರತದ ಪೈಲಟ್ ಗಳು ಹೌದು ಇದು ಏರ್ ಇಂಡಿಯಾ ವಿಮಾನ. ಫ್ರಾಂಕ್ ಫರ್ಟ್ ನತ್ತ ಸಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತು ಮುಂದುವರೆಸಿದ ಪಾಕ್ ಎಟಿಸಿ ಅಧಿಕಾರಿಗಳು, ಮಾರಕ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ನೀವು ಪರಿಹಾರ ವಿಮಾನಗಳನ್ನು ರವಾನಿಸುತ್ತಿದ್ದೀರಿ. ನಿಮ್ಮ ಕಾರ್ಯ ಹೆಮ್ಮೆ ಪಡುವಂತದ್ದು, ಪ್ರೌಡ್ ಆಫ್ ಯೂ.. ಗುಡ್ ಲಕ್ ಎಂದು ಹೇಳಿದೆ. ಪಾಕ್ ಎಟಿಸಿ ಅಧಿಕಾರಿಗಳ ಮಾತಿಗೆ ಅಚ್ಚರಿಗೊಂಡ ಭಾರತೀಯ ಪೈಲಟ್ ಗಳು ಥ್ಯಾಂಕ್ ಯೂ ಸೋ ಮಚ್ (Thank you so much) ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಪಾಕಿಸ್ತಾನದ ಎಟಿಸಿ ಅಧಿಕಾರಿಗಳು ಭಾರತದ ಪೈಲಟ್ ಗಳಿಗೆ ಇರಾನ್ ನಲ್ಲಿ ನೆರವು ಕೂಡ ನೀಡಿದ್ದಾರೆ. ಭಾರತದ ಏರ್ ಇಂಡಿಯಾ ವಿಮಾನ ಇರಾನ್ ವಾಯುಗಡಿ ಪ್ರವೇಶ ಮಾಡಿದಾಗ ತಾಂತ್ರಿಕ ಕಾರಣದಿಂದಾಗಿ ಇರಾನ್ ಎಟಿಸಿ ಟವರ್ ಸಂಪರ್ಕ ಸಾಧ್ಯವಾಗಿರಲಿಲ್ಲ. ಈ ವೇಳೆ ಇರಾನ್ ಎಟಿಸಿಯನ್ನು ಸಂಪರ್ಕಿಸಿದ್ದ ಪಾಕಿಸ್ತಾನ ಎಟಿಸಿ ಅಧಿಕಾರಿಗಳು ಭಾರತದ ವಿಮಾನದ ಕುರಿತು ಇರಾನ್ ಎಟಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಆಗ ಏರ್ ಇಂಡಿಯಾ ವಿಮಾನವನ್ನು ಸಂಪರ್ಕಿಸಿದ್ದ ಇರಾನ್ ಎಟಿಸಿ ಅಧಿಕಾರಿಗಳು ಭಾರತೀಯ ಪೈಲಟ್ ಗಳಿಗೆ ಶಾರ್ಟ್ ಕಟ್ ರೂಟ್ (ಹತ್ತಿರದ ವಾಯು ದಾರಿ) ಸೂಚಿಸಿ ಅದೇ ಮಾರ್ಗದಲ್ಲಿ ಚಲಿಸುವಂತೆ ಸಲಹೆ ನೀಡಿದರು. ಇದರಿಂದ ಏರ್ ಇಂಡಿಯಾ ವಿಮಾನದ ಸಾಕಷ್ಟು ಪ್ರಯಾಣದ ಸಮಯ ಉಳಿತಾಯವಾಯಿತು. ಇನ್ನು ಪಾಕಿಸ್ತಾನ ಭಾರತೀಯ ವಿಮಾನಕ್ಕೆ ತನ್ನ ವಾಯುಗಡಿ ತೆರೆಯುವ ಮೂಲಕ ಪ್ರಯಾಣದ ಬರೊಬ್ಬರಿ 15 ನಿಮಿಷಗಳ ಅಂತರವನ್ನು ತಗ್ಗಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಭಾರತದ ಕಾರ್ಯವನ್ನು ಪಾಕಿಸ್ತಾನ ಮಾತ್ರವಲ್ಲದೇ ಟರ್ಕಿ ಎಟಿಸಿ, ಜರ್ಮನ್ ಎಟಿಸಿ ಕೂಡ ಶ್ಲಾಘಿಸಿದೆ. ಇನ್ನು ಏಪ್ರಿಲ್ 3ರ ಬೆಳಗ್ಗೆ 9.15ಕ್ಕೆ ಜರ್ಮನಿ ತಲುಪಬೇಕಿದ್ದ ಏರ್ ಇಂಡಿಯಾ ವಿಮಾನ ಪಾಕ್ ಮತ್ತು ಇರಾನ್ ಎಟಿಸಿ ಅಧಿಕಾರಿಗಳ ನೆರವಿನಿಂದ 45 ನಿಮಿಷ ಬೇಗ ಅಂದಕೆ 8.35ಕ್ಕೆ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ತಲುಪಿದೆ.
ಇನ್ನು ಏರ್ ಇಂಡಿಯಾ ಭಾರತದಲ್ಲಿ ಅತಂತ್ರರಾಗಿರುವ ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತು ಕೆನಡಾದ ರಾಯಭಾರ ಕಚೇರಿ ಮನವಿ ಮೇರೆಗೆ ಆಯಾ ದೇಶಳ ಪ್ರಜೆಗಳನ್ನು 18 ವಿಮಾನಗಳ ಮೂಲಕ ಅವರ ತವರು ದೇಶಕ್ಕೆ ಬಿಟ್ಟು ಬರುತ್ತಿದೆ. ಈ ಪೈಕಿ ಚೀನಾದಿಂದ ಬರುತ್ತಿರುವ ವೈದ್ಯಕೀಯ ಪರಿಕರಗಳನ್ನು ಏರ್ ಇಂಡಿಯಾ ವಿಮಾನಗಳು ಹೊತ್ತು ಅಗತ್ಯ ದೇಶಗಳಿಗೆ ಸರಬರಾಜು ಮಾಡುತ್ತಿವೆ. ಏಪ್ರಿಲ್ 98ರವರೆಗೂ ಏರ್ ಇಂಡಿಯಾದ ಈ ಕಾರ್ಯ ಮುಂದುವರೆಯಲಿದೆ ಎಂದು ಹೇಳಲಾಗಿದೆ.
Comments are closed.