ರಾಷ್ಟ್ರೀಯ

ಏ.15ರಿಂದ ಹಂತ, ಹಂತವಾಗಿ ಲಾಕ್ ಡೌನ್ ತೆರವಿಗೆ ಸಿದ್ಧತೆ: ಯೋಗಿ ಆದಿತ್ಯನಾಥ್

Pinterest LinkedIn Tumblr


ನವದೆಹಲಿ/ಲಕ್ನೋ:ಕೋವಿಡ್ 19 ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ಒಂದು ವೇಳೆ ಏಪ್ರಿಲ್ 15ರಿಂದ ಲಾಕ್ ಡೌನ್ ಅಂತ್ಯಗೊಳ್ಳುವುದೇ ಹೌದಾದರೆ ಹಂತ, ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ಸಿದ್ಧತೆ ನಡೆಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

ರಾಜ್ಯದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಹಂತ, ಹಂತವಾಗಿ ಒಂದೊಂದು ಪ್ರದೇಶದ ಲಾಕ್ ಡೌನ್ ತೆರವುಗೊಳಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿ ವಿವರಿಸಿದೆ.

ಎಂಎಂಜಿ ಜಿಲ್ಲಾ ಆಸ್ಪತ್ರೆಯಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಜತೆ ಅನುಚಿತವಾಗಿ ವರ್ತಿಸಿದ ತಬ್ಲಿಘಿ ಜಮಾತ್ ನ ಆರು ಮಂದಿ(ಕ್ವಾರಂಟೈನ್ ಲ್ಲಿದ್ದ) ವಿರುದ್ಧ ಎನ್ ಎಸ್ ಎ (ರಾಷ್ಟ್ರೀಯ ಭದ್ರತಾ ಕಾಯ್ದೆ)ಯಡಿ ಪ್ರಕರಣ ದಾಖಲಿಸುವಂತೆ ಸಿಎಂ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

“ಅವರು ಕಾನೂನನ್ನು ಪಾಲಿಸಿಲ್ಲ. ಒಂದು ಅವರು ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು. ಆದರೆ ಇವರು ಮಾನವೀಯತೆಯ ಶತ್ರುಗಳು. ಮಹಿಳಾ ವೈದ್ಯ ಸಿಬ್ಬಂದಿಗಳ ಜತೆ ನಡೆದುಕೊಂಡ ರೀತಿ ಘೋರ ಅಪರಾಧವಾಗಿದೆ. ಅದಕ್ಕಾಗಿ ಎನ್ ಎಸ್ ಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಎಂ ಯೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.