
ಲಂಡನ್, ಮಾ. 28: ಲಂಡನ್ ನಲ್ಲಿ ಕೋವಿಡ್ -19 ಸೋಂಕು ಹೊಂದಿದವರಿಗೆ ಚಿಕಿತ್ಸೆ ನೀಡಲು ಮೆಗಾ ಆಸ್ಪತ್ರೆಯನ್ನು ನಿರ್ಮಿಸಿದೆ. ಅದರ ಸಾಮರ್ಥ್ಯ ಎಷ್ಟು ಗೊತ್ತೇ ನಾಲ್ಕು ಸಾವಿರ ಹಾಸಿಗೆಗಳು. ಪೂರ್ವ ಲಂಡನ್ನಲ್ಲಿರುವ ಎಕ್ಸೆಲ್ ಪ್ರದರ್ಶನ ಕೇಂದ್ರವನ್ನೇ ಎನ್ ಎಚ್ ಎಸ್ ನೈಟಿಂಗೇಲ್ ತುರ್ತು ಕೊರೊನಾ ಆಸ್ಪತ್ರೆಯನ್ನಾಗಿ ಮಾರ್ಪಡಿಸುತ್ತಿದೆ.
ಬ್ರಿಟನ್ನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಲಂಡನ್ನಲ್ಲಿ ತುರ್ತಾಗಿ ಆಸ್ಪತ್ರೆ ನಿರ್ಮಿಸಿ ಚಿಕಿತ್ಸೆ ಆರಂಭಿಸದಿದ್ದರೆ ದುರಂತ ಇನ್ನೂ ಹೆಚ್ಚಬಹುದೆಂಬುದು ಬ್ರಿಟನ್ ಸರಕಾರದ ಆತಂಕ. ಈ ಹಿನ್ನೆಲೆಯಲ್ಲಿ ಎಲ್ಲ ಪೂರ್ವ ಸಿದ್ಧತೆ ಆರಂಭ ವಾಗಿದೆ. ಶುಕ್ರವಾರ ಒಂದೇ ದಿನ 181 ಹೊಸ ಪ್ರಕರಣ ಗಳು ದಾಖಲಾಗಿದ್ದು, 784 ಮಂದಿ ಇದುವರೆಗೂ ಸತ್ತಿದ್ದಾರೆ. ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯ ಸಾಮಾಜಿಕ ಅಂತರಕ್ಕೆ ಸಾಕಷ್ಟು ಪ್ರಾಮುಖ್ಯ ನೀಡಿ ಹಾಸಿಗೆಗಳನ್ನು ಜೋಡಿಸಲಾಗುತ್ತಿದೆ.
ಅಗತ್ಯ ವಸ್ತುಗಳ ಪೂರೈಕೆಗಾಗಿ ಮತ್ತು ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸಲು ಆಧುನಿಕ ವ್ಯವಸ್ಥೆ ಯನ್ನು ಒಳಗೊಂಡು ಸುಸಜ್ಜಿತ ಆಂಬ್ಯುಲೆನ್ಸ್ ಒದಗಿ ಸಲಾ ಗುವುದು. ಒಟ್ಟು ಎರಡು ವಿಭಾಗಗ ಳನ್ನು ರೂಪಿಸಲಿದ್ದು, ತಲಾ 2 ಸಾವಿರ ಮಂದಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗು ತ್ತಿದೆ. ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಟ್ಯಾಂಕ್ ಮತ್ತಿ ತರ ವೈದ್ಯ ಕೀಯ ಉಪಕರಣಗಳನ್ನು ಒದಗಿಸಲಾಗುತ್ತಿದೆ.
ಎಪ್ರಿಲ್ 4ರಂದು ಪ್ರಾರಂಭ ಆಸ್ಪತ್ರೆ ರೂಪಿಸುವ ಕಾರ್ಯ ಕೊನೆಯ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎಪ್ರಿಲ್ 4ರಂದು ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಇನ್ನೂ ಜಾಗತಿಕ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವಲ್ಲಿ 40 ವರ್ಷಗಳ ಕಾರ್ಯಾನುಭವ ಇರುವ ಬೊಗ್ಸೆ„ಡ್ನ (62) ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಈ ಆಸ್ಪತ್ರೆಯ ಉದ್ದ ಸುಮಾರು ಒಂದು ಕಿ.ಮೀ. ಅಗಲವೂ ಸಾಕಷ್ಟಿದೆ. ನಾಲ್ಕು ಸಾವಿರ ಮಂದಿಗೆ ಚಿಕಿತ್ಸೆ ನೀಡಲು ಸಿದ್ಧಗೊಳ್ಳುತ್ತಿರುವ ಈ ಆಸ್ಪತ್ರೆ ಇದುವರೆಗೆ ಲಂಡನ್ನ ಪ್ರದರ್ಶನ ಕೇಂದ್ರವಾಗಿದೆ.
Comments are closed.