
ಬೀಜಿಂಗ್ (ಮಾ.24): ಬೂದಿ ಮುಚ್ಚಿದ ಕೆಂಡದಂತಿದ್ದ ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ಅಟ್ಟಹಾಸ ಆರಂಭವಾಗಿದೆ. ಸೋಮವಾರ 78 ಹೊಸ ಪ್ರಕರಣ ದಾಖಲಾಗಿದ್ದು, 7 ಜನ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು ಚೀನಾದಲ್ಲಿ. ನಂತರದಲ್ಲಿ ಈ ಭೀಕರ ವೈರಸ್ ಇಡೀ ವಿಶ್ವವನ್ನೇ ಹಬ್ಬಿತ್ತು. ಇತ್ತೀಚೆಗಷ್ಟೇ ಚೀನಾದಲ್ಲಿ ಹೊಸ ಪ್ರಕರಣ ದಾಖಲಾಗುವುದು ಸಂಪೂರ್ಣವಾಗಿ ನಿಂತಿತ್ತು. ಆದರೆ ಚೀನಾದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣವೇ ಗೋಚರವಾಗುತ್ತಿಲ್ಲ. ಸೋಮವಾರ ಒಂದೇ ದಿನ ಚೀನಾದಲ್ಲಿ 78 ಹೊಸ ಪ್ರಕರಣ ದಾಖಲಾಗಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಚೀನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿತ್ತು. ರೋಗಿಗಳಿಗಾಗಿ ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿತ್ತು. ಇನ್ನೇನು ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ಮತ್ತೆ ಈ ವೈರಸ್ ಚೀನಾವನ್ನು ಕಾಡಲು ಆರಂಭವಾಗಿದೆ.
ಚೇತರಿಕೆ ಕಾಣದ ಇಟಲಿ:
ಕೊರೋನಾ ವೈರಸ್ಗೆ ನಲುಗಿರುವ ಇಟಲಿಗೆ ಚೇತರಿಕೆ ಕಾಣಲು ಸಾಧ್ಯವಾಗುತ್ತಿಲ್ಲ. ದುಃಸ್ವಪ್ನವಾಗಿ ಕಾಡುತ್ತಿರುವ ಈ ವೈರಸ್ ಇಟಲಿಯಲ್ಲಿ 6,078 ಜನರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಸಂಪೂರ್ಣ ಇಟಲಿಯನ್ನೇ ಬಂದ್ ಮಾಡಿ ಅಲ್ಲಿನ ಪ್ರಧಾನಿ ಆದೇಶ ಹೊರಡಿಸಿದ್ದಾರೆ.
ಇಟಲಿಯಲಲ್ಇ 6 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಸೋಮವಾರ ಒಂದೇ ದಿನ 602 ಜನರು ಅಸುನೀಗಿದ್ದಾರೆ. ಇನ್ನು ಇಟಲಿಯಲ್ಲಿ ಸೋಂಕಿತರ ಸಂಖ್ಯೆ 63 ಸಾವಿರದ ಗಡಿ ತಲುಪಿದೆ.ಇನ್ನು, ದಿನ ನಿತ್ಯ ಬಳಕೆಯ ವಸ್ತುಗಳು ಸರಿಯಾಗಿ ಸಿಗದೆ ಮಧ್ಯಮ ವರ್ಗದ ಜನತೆ ಕಂಗಾಲಾಗಿದೆ. ಹೀಗಾಗಿ, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ.
Comments are closed.