ಕರ್ನಾಟಕ

ಸಿಂಗಾಪುರದಿಂದ ಆಗಮಿಸಿದ್ದ ಚಿಕ್ಕಮಗಳೂರು ಮಹಿಳೆಗೆ ಕೊರೊನಾ ಶಂಕೆ

Pinterest LinkedIn Tumblr


ಚಿಕ್ಕಮಗಳೂರು: ಸಿಂಗಾಪುರದಿಂದ ಆಗಮಿಸಿದ್ದ ಮಹಿಳೆಗೆ ಜ್ವರ, ಕೆಮ್ಮು ಶೀತ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶನಿವಾರ ಇಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹಿಳೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

40 ವರ್ಷದ ಮಹಿಳೆ 6 ದಿನಗಳ ಹಿಂದೆ ಸಿಂಗಾಪುರದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಜ್ವರ, ಕೆಮ್ಮು,ಶೀತ ಕಾಣಿಸಿಕೊಂಡಿತ್ತು. ಮಹಿಳೆಗೆ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಂಕಿತ ಮಹಿಳೆಯ ರಕ್ತ, ಗಂಟಲು ಧ್ರವ ಸಂಗ್ರಹಿಸಿ ಹಾಸನ ಲ್ಯಾಬ್ ಗೆ ರವಾನೆ ಮಾಡಲಾಗಿದೆ.

Comments are closed.