ಮಂಗಳೂರು ; ಶ್ರೀ ಗುರುಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅರೆಮಾದನಹಳ್ಳಿ ಗುರುಗಳು ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರದ ಸುತ್ತುಪೌಳಿಯ ನಿರ್ಮಾಣ ಅಪೂರ್ವದುದು ಸುತ್ತು ಪೌಳಿಯ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುವುದೇ ಸುವರ್ಣಾವಕಾಶ ಎಂದು ಹೇಳಿದರು.
ನಮ್ಮ ಗಳಿಕೆಯಲ್ಲಿ ಕಿಂಚಿತ್ ದೇವರಿಗೆ ಸಮರ್ಪಣೆ ಮಾಡಿದರೆ ದೇವಿಯು ನಮ್ಮನ್ನು ಕೈ ಹಿಡಿಯುತ್ತಾಳೆ. ನಾವು ಮಾಡುವ ಸಂಪಾದನೆ ಶಾಶ್ವತ ಆಗುವಂತೆ ಮಾಡುತ್ತೇವೆ ಇದರ ಉಪಯೋಗ ಸದ್ವಿನಿಯೋಗ ದಲ್ಲಿ ತೊಡಗಿಸಬೇಕು ಹೀಗೆ ಧರ್ಮ ಮಾರ್ಗದಲ್ಲಿ ನಡೆದಲ್ಲಿ ನಮ್ಮ ಜೀವನ ಸಾರ್ಥಕ್ಯ ಆಗುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಶ್ರೀ ಕ್ಷೇತ್ರದ 2ನೇ ಮೊಕ್ತೇಸರ ಎಂ. ಸುಂದರ್ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ ಆಚಾರ್, ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಕ್ತಾದಿಗಳು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಸದಸ್ಯರು ಹಾಗು ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು. ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

Comments are closed.