ಕರಾವಳಿ

ಯಕ್ಷಧ್ರುವ ಪಟ್ಲ ಸಂಭ್ರಮ-2020 : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು : ಯಕ್ಷಧ್ರುವ ಪಟ್ಲ ಸಂಭ್ರಮ-2020 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ ಮಹಿಳಾ) ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕನಿಷ್ಠ 50% ಅಂಕಗಳಿರಬೇಕು. ಅಂಕ ಪಟ್ಟಿ ಹಾಗೂ ಬ್ಯಾಂಕ್‌ನ ಉಳಿತಾಯ ಖಾತೆಯ ನಕಲು ಪ್ರತಿಗಳನ್ನು ಲಗತ್ತಿಸ ಬೇಕು. ಪ್ರತಿ ಸಾರಿಯಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ 90%ಕ್ಕೂ ಮೇಲ್ಪಟ್ಟು ಅತ್ಯಧಿಕ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಬಂಗಾರದ ಪದಕದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದರೊಂದಿಗೆ ವಿದ್ಯಾರ್ಥಿ ಪುರಸ್ಕಾರವನ್ನು ಪ್ರಾಥಮಿಕ, ಪ್ರೌಢ, ಪಿ.ಯು.ಸಿ/ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೀಗೆ ಒಟ್ಟು 5 ವಿಭಾಗಗಳಲ್ಲಿ ಪ್ರತ್ಯೇಕವಾಗಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ನೀಡಲಾಗುವುದು.

ವೃತ್ತಿಪರ ಕಲಾವಿದರ ಎಲ್ಲಾ ಮಕ್ಕಳಿಗೂ(೫೦%ಗಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದರೆ) ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಅರ್ಜಿ ನಮೂನೆಯನ್ನು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)ಮಂಗಳೂರು, ಕೇಂದ್ರ ಕಛೇರಿ, ಎಂಪೈರ್ ಮಾಲ್, ಇಲ್ಲಿ ಪಡೆದು ಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.05.2020 ಹೆಚ್ಚಿನ ವಿವರಗಳಿಗಾಗಿ ಡಾ. ಮನು ರಾವ್, ಉಪಾಧ್ಯಕ್ಷರು (9844087664) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Comments are closed.