ಕರಾವಳಿ

ಮುಂಬಯಿ : ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಸತೀಶ್ ಐಲ್ ಆಯ್ಕೆ

Pinterest LinkedIn Tumblr

ಮುಂಬಯಿ : ಕಳೆದ 57 ವರ್ಷಗಳಿಂದ ಕನ್ನಡಿಗರ ಸೇವೆಯಲ್ಲಿ ನಿರತರಾಗಿರುವ ವಿಕ್ರೋಲಿ ಕನ್ನಡ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಶ್ಯಾಮಸುಂದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಮಲೆಯಾಳಿ ಮನೆಮಾತಿನ ಗಡಿನಾಡ ಕನ್ನಡಿಗ ಮೂಲತ ಉಪ್ಪಳದವರಾದ ಸತೀಶ್ ಆರ್. ಐಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ ಮುಗಿಸಿ ಮುಂಬಯಿ ಸೇರಿದ ಇವರು ಕೆನರಾ ವಿದ್ಯಾದಾಯಿನಿ ಮತ್ತು ಕನ್ನಡ ಭವನ ರಾತ್ರಿ ಶಾಲೆಯಲ್ಲಿ ಕಲಿತು ಬಳಿಕ ಅಂಬೇಡ್ಕರ್ ಕಾಲೇಜ್ ನಿಂದ ಉನ್ನತ ಶಿಕ್ಷಣವನ್ನು ಪಡೆದರು.

ಸತೀಶ್ ಆರ್. ಐಲ್ ಒರ್ವ ಉತ್ತಮ ಸಮಾಜ ಸೇವಕರಾಗಿದ್ದು ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಮುಂಬಯಿ ಹದಿನಾರು ಸಮಸ್ತರ ಸಭೆ ಇದರಲ್ಲಿ ಸಕ್ರಿಯರಾಗಿದ್ದು, ಭಾರತೀಯ ಜನತಾ ಪಕ್ಷದಲ್ಲಿ ಕ್ರೀಯಾಶೀಲರಾಗಿರುವ ಇವರನ್ನು ಮಹಾರಾಷ್ಟ್ರ ಸರಕಾರವು ಎಸ್.ಇ.ಓ. ಆಗಿ ನೇಮಿಸಿದೆ.

ವಿಕ್ರೋಲಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಉದಯ ಎಲ್ ಶೆಟ್ಟಿ ಯವರು ಆಯ್ಕೆ ಯಾಗಿರುವರು.

ವೇದಿಕೆಯಲ್ಲಿ ಪ್ರವೀಣ್ ಕೆ. ಶೆಟ್ಟಿ, ಉಮೇಶ್ ಎನ್ ಪೂಜಾರಿ, ಜೆ ಡಿ ಕರ್ಕೇರ, ಅನಂದ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.