ಮನೋರಂಜನೆ

ಈ ನಟನಿಗೆ KISS ಮಾಡಲು ನಾನು ರೆಡಿ ಎಂದ ಖ್ಯಾತ ನಟಿ ತಮನ್ನಾ ಭಾಟಿಯಾ

Pinterest LinkedIn Tumblr


ನವದೆಹಲಿ: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಅಭಿಮಾನಿಗಳ ಕೊರತೆ ಇಲ್ಲ. ತಮನ್ನಾ ಇದುವರೆಗೆ ಆನ್ ಸ್ಕ್ರೀನ್ KISS ನೀಡದೆ ಇರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆದರೆ, ಈ ಕುರಿತು ತಮನ್ನಾ ಒಂದು ನಿಬ್ಬೇರಗಾಗಿಸುವ ಹೇಳಿಕೆಯೊಂದನ್ನು ನೀಡಿದ್ದಾಳೆ. ‘ಬಾಹುಬಲಿ’ಖ್ಯಾತಿಯ ನಟಿ ತಮನ್ನಾ ಭಾಟಿಯಾ ತನ್ನ ಸ್ವಯಂವರದಲ್ಲಿ ಮೂವರು ಸ್ಟಾರ್ಸ್ ಗಳನ್ನು ನೋಡಲು ಬಯಸುತ್ತಾಳೆ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ ಆ ಮೂವರಲ್ಲಿ ಒಬ್ಬರಿಗಾಗಿ ತಮ್ಮ ‘ನೋ ಕಿಸ್ಸಿಂಗ್’ ಪಾಲಸಿಯನ್ನು ಕೂಡ ಮುರಿಯಲು ತಾನು ಸಿದ್ಧ ಎಂದು ಹೇಳಿದ್ದಾಳೆ.

ಇತ್ತೀಚೆಗಷ್ಟೇ ನಡೆಸಲಾಗಿರುವ ಸಂದರ್ಶನವೊಂದರಲ್ಲಿ ಒಂದು ವೇಳೆ ನಿಮ್ಮ ಸ್ವಯಂವರ ನಡೆದರೆ, ಯಾವ ಮೂವರು ನಟರನ್ನು ನೀವು ಕರೆಯಲು ಬಯಸುವಿರಿ? ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರ ನೀಡಿರುವ ತಮನ್ನಾ, ತಮ್ಮ ಸ್ವಯಂವರದಲ್ಲಿ ತಾವು ಹೃತಿಕ್ ರೋಶನ್, ವಿಕ್ಕಿ ಕೌಶಲ್ ಹಾಗೂ ಪ್ರಭಾಸ್ ರನ್ನು ನೋಡಲು ಬಯಸುವೆ ಎಂದಿದ್ದಾರೆ. ಈ ಮೂವರು ನಟರು ತಮಾನ್ನಾ ಪಾಲಿಗೆ ಎಷ್ಟು ಮಹತ್ವ ಪಡೆದಿದ್ದಾರೆ ಎಂಬುದು ನೀವು ಊಹಿಸಬಹುದು. ಆದರೆ, ಇದರ ಜೊತೆಗೆ ತಮನ್ನಾ ಮತ್ತೊಂದು ಹೇಳಿಕೆಯನ್ನೂ ಸಹ ನೀಡಿದ್ದು, ಈ ಹೇಳಿಕೆಯನ್ನು ಕೇಳಿ ನೀವು ಸಹ ಬೆಚ್ಚಿಬೀಳಬಹುದು.

ತಮ್ಮ ಹೇಳಿಕೆಯನ್ನು ಮುಂದುವರೆಸಿರುವ ತಮನ್ನಾ ತಾವು ‘ಆನ್ ಸ್ಕ್ರೀನ್ ನೋ ಕಿಸ್ಸಿಂಗ್’ ಪಾಲಸಿ ಅನುಸರಿಸುತ್ತಿರುವುದಾಗಿ ಹೇಳಿದ್ದು, ಇದು ತಮ್ಮ ಕಾಂಟ್ರಾಕ್ಟ್ ನಲ್ಲಿಯೂ ಕೂಡ ಶಾಮೀಲಾಗಿದೆ ಎಂದಿದ್ದಾರೆ. ಆದರೆ, ಯಾವುದೇ ಓರ್ವ ಸ್ಟಾರ್ ಗಾಗಿ ನೀವು ನಿಮ್ಮ ಪಾಲಸಿಯನ್ನು ಮುರಿಯಲು ಬಯಸುವಿರಿ ಎಂದು ಕೇಳಲಾಗಿ, ಇದಕ್ಕೆ ಉತ್ತರಿಸಿರುವ ತಮನ್ನಾ, ಹೃತಿಕ್ ರೋಶನ್ ಜೊತೆ ಒಂದು ವೇಳೆ ತಾವು ಯಾವುದೇ ಚಿತ್ರದಲ್ಲಿ ನಟಿಸಿದರೆ, ತಾವು ತಮ್ಮ ಈ ಪಾಲಸಿಯನ್ನು ಮುರಿಯಲು ಸಿದ್ಧ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ತಮನ್ನಾ, “ಕೆಲ ದಿನಗಳ ಹಿಂದೆಯಷ್ಟೇ ನಾನು ಹೃತಿಕ್ ರೋಶನ್ ಜೊತೆಯ ಭೇಟಿಯಾಗಿದ್ದೆ ಹಾಗೂ ನಾನು ಅವರ ಅಭಿಮಾನಿಯಾಗಿದ್ದೇನೆ ಎಂದು ಹೇಳಿರುವೆ. ಅದಕ್ಕೆ ಉತ್ತರಿಸಿರುವ ಹೃತಿಕ್ ಕೇವಲ ಓಕೆ ಎಂದು ಉತ್ತರಿಸಿ, ಮುನ್ನಡೆದಿದ್ದಾರೆ. ಬಳಿಕ ಥಟ್ಟನೆ ತಿರುಗಿದ ಅವರು ನೀವು ನನ್ನ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳುವಿರೆ? ಎಂದು ಕೇಳಿದರು. ಆಗ ನನಗೂ ಕೂಡ ಫೋಟೋ ಕ್ಲಿಕ್ಕಿಸಬೇಕಿದೆ ಎಂದು ನಾನು ಹೇಳಿದೆ” ಎಂದಿದ್ದಾರೆ. ಬಳಿಕ ತಮನ್ನಾ ಹಾಗೂ ಹೃತಿಕ್ ಅವರ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು.

Comments are closed.