ಕರಾವಳಿ

ಜನೌಷದಿ ಕೇಂದ್ರಗಳು ಜನರ ಆಶಾಕಿರಣವಾಗಿದೆ – ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಕೇಂದ್ರ ಸರಕಾರವು ಬಡವರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದ ಜನೌಷದಿ ಯೋಜನೆಯ ಬಗ್ಗೆ ಜನರಿಗೆ ಮಾಹಿತಿಯ ನೀಡುವ ಕೆಲಸಗಳು ಆಗಬೇಕಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಜನೌಷದಿ ದಿನಾಚರಣೆ ಪ್ರಯುಕ್ತ ನಾಗುರಿಯ ಜನೌಷದಿ ಕೇಂದ್ರದ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಬಡವರು ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಪಡುವ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ದರದಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಜೌಷದಿ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನೌಷದಿ ಕೇಂದ್ರಗಳು ಜನರ ಆಶಾಕಿರಣವಾಗಿದೆ ಎಂದರು.

ಆಸ್ಪತ್ರೆಗೆ ದಾಖಲಾಗುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ತಮ್ಮ ಔಷಧೀಯ ಖರ್ಚುಗಳನ್ನು ಭರಿಸಲು ಸಾಲದ ಮೊರೆ ಹೋಗುವುದನ್ನು ತಪ್ಪಿಸಲು ಇದೊಂದು ಒಳ್ಳೆಯ ಯೋಜನೆಯಾಗಿದೆ. ಮಾರುಕಟ್ಟೆಯಲ್ಲಿ ದೊರಕುವ ಅದೇ ಗುಣಮಟ್ಟದ ಔಷದಿಗಳು ಶೇಖಡ 40% ಕಡಿತ ದರದಲ್ಲಿ ಜನೌಷದಿ ಕೇಂದ್ರಗಳಲ್ಲಿ ದೊರಕುತ್ತಿದೆ.

ಇಂತಹ ಜನಪರ ಯೋಜನೆಗಳನ್ನು ರೂಪಿಸಲು ಪ್ರಧಾನಿ ಮೋದಿಜೀಯವರೊಂದಿಗೆ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ ದಿವಂಗತ ಅನಂತ್ ಕುಮಾರ್ ಅವರನ್ನು ಈ ಸಂಧರ್ಭದಲ್ಲಿ ಸ್ಮರಿಸಬೇಕು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಸಂದೀಪ್ ಗರೋಡಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ಜೆ.ಸುರೇಂದ್ರ, ಪ್ರಭಾ ಮಾಲಿನಿ, ಯೋಗೀಶ್ ಭಟ್, ಗಣೇಶ್ ಕಾರ್ಣಿಕ್, ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Comments are closed.