ಕರ್ನಾಟಕ

ಸತ್ತವರ ಕುಟುಂಬಕ್ಕೆ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದ ರವಿ ಪೂಜಾರಿ

Pinterest LinkedIn Tumblr


ಬೆಂಗಳೂರು: ಭೂಗತ ಪಾತಕಿ ಅಂದರೆ ರಕ್ತ ಪಿಪಾಸು ಎಂದು ಹೇಳುತ್ತಿದ್ದರು. ಆದರೆ ಈ ರವಿ ಪೂಜಾರಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿದ್ದಾನೆ. ಅದು ಕೂಡ ಸತ್ತವರ ಕುಟುಂಬಕ್ಕೆ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾನೆ. ಅದನ್ನೇ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರಿನ ತಿಲಕ್‍ನಗರದ ಶಬನಂ ಬಿಲ್ಡರ್ಸ್ ಮಾಲೀಕನ ಬಳಿ ಹಣ ವಸೂಲಿಗೆ ಪ್ರಯತ್ನ ಮಾಡಿದ್ದ ರವಿ ಪೂಜಾರಿ ಆ ಮಾಲೀಕನನ್ನು ಕೊಲೆ ಮಾಡುವುದಕ್ಕೆ ಹುಡುಗರನ್ನು ಕಳುಹಿಸಿದ್ದನು. ಆದರೆ ಬಿಲ್ಡರ್ ಕಚೇರಿಯಲ್ಲಿ ಮಾಲೀಕ ಇಲ್ಲದೆ ಇದ್ದ ಕಾರಣ ರವಿ ಪೂಜಾರಿ ಹುಡುಗರು ಟೈಪಿಸ್ಟ್‍ಗಳಾದ ಶೈಲಜಾ ಮತ್ತು ರವಿಯನ್ನು ಕೊಲೆ ಮಾಡಿ ಬಂದಿದ್ದರು. ಇದನ್ನೂ ಓದಿ: ರವಿ ಪೂಜಾರಿ ಇಲ್ಲಿ ನಟೋರಿಯಸ್- ಅಲ್ಲಿ ಸಮಾಜ ಸೇವಕ!

ಈ ವಿಚಾರ ತಿಳಿದ ರವಿ ಪೂಜಾರಿ ಮೃತ ವ್ಯಕ್ತಿಗಳ ಮನೆಯವರಿಗೆ ಕರೆ ಮಾಡಿ ಕ್ಷಮೆ ಕೇಳಿದ್ದಾನೆ. ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಹೇಳುವಾಗ,”ನಾನು ನನ್ನ ಹುಡುಗರಿಗೆ ಬಿಲ್ಡರ್ ಇಲ್ಲದಿದ್ದರೆ ಬೆದರಿಸಿ ಬನ್ನಿ ಎಂದು ಹೇಳಿದ್ದೆ. ಆದರೆ ಹುಡುಗರು ಅವರನ್ನು ಕೊಂದು ಬಂದಿದ್ದರು. ಇದನ್ನು ಕೇಳಿ ನನಗೆ ಬೇಜಾರಾಯಿತು. ಅದಕ್ಕೆ ನಾನು ಮೃತರ ಮನೆಯವರ ದೂರವಾಣಿ ಸಂಖ್ಯೆಯನ್ನು ಪಡೆದು ಕ್ಷಮಾಪಣೆ ಕೇಳಿದ್ದೀನಿ. ಈಗಲೂ ನನಗೆ ಈ ವಿಚಾರಕ್ಕೆ ಬೇಸರವಿದೆ” ಎಂದು ಹೇಳಿಕೊಂಡಿದ್ದಾನೆ.

Comments are closed.