ಮಂಗಳೂರು : ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ವತಿಯಿಂದ ರಾಜಕೀಯ ಮತ್ತು ಧಾರ್ಮಿಕ ಪರಿಷತ್ತಿನ ಜವಾಬ್ದಾರಿ ವಹಿಸಿಕೊಂಡವರಿಗೆ ಅಭಿನಂದನಾ ಕಾರ್ಯಕ್ರಮವು ವಿಶ್ವಹಿಂದೂ ಪರಿಷದ್ ಕಾರ್ಯಾಲಯ “ವಿಶ್ವಶ್ರೀಯಲ್ಲಿ” ನಡೆಯಿತು,
ವಿಶ್ವಹಿಂದೂ ಪರಿಷತ್ತಿನ ವಿವಿಧ ಜವಾಬ್ದಾರಿ ನಿರ್ವಹಿಸಿ ಪ್ರಸ್ತುತ ರಾಜಕೀಯ ಮತ್ತು ಧಾರ್ಮಿಕ ಪರಿಷತ್ತಿನ ಜವಾಬ್ದಾರಿ ವಹಿಸಿಕೊಂಡ ಶ್ರೀ ದಿವಾಕರ್ ಪಾಂಡೇಶ್ವರ್ ( ಮಹಾ ಪೌರರು- ಮಂಗಳೂರು ಮಹಾನಗರ), ಶ್ರೀ ಸುಧರ್ಶನ್ ಮೂಡಬಿದ್ರೆ ( ಜಿಲ್ಲಾಧ್ಯಕ್ಷರು- ಬಿ.ಜೆ.ಪಿ ), ಶ್ರೀ ಜಗದೀಶ್ ಶೇಣವ ( ಜಿಲ್ಲಾ ವಕ್ತಾರರು- ಬಿ.ಜೆ.ಪಿ ), ಶ್ರೀ ವಿನಯ್ ಎಲ್ ಶೆಟ್ಟಿ ( ನಿರ್ದೇಶಕ ಸದಸ್ಯರು -ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ), ಶ್ರೀ ಜಿತೇಂದ್ರ ಕೊಟ್ಟಾರಿ ( ಜಿಲ್ಲಾ ಕೋಶಾಧಿಕಾರಿ – ಬಿ.ಜೆ.ಪಿ ), ಶ್ರೀ ಗೋಪಾಲ್ ಕುತ್ತಾರ್ ( ಧಾರ್ಮಿಕ ಪರಿಷತ್ತಿನ ಜಿಲ್ಲಾ ಸದಸ್ಯರು), ಶ್ರೀ ಮುರಳಿ ಹಸಂತಡ್ಕ ( ಧಾರ್ಮಿಕ ಪರಿಷತ್ತಿನ ಜಿಲ್ಲಾ ಸದಸ್ಯರು) ಇವರನ್ನು ಅಭಿನಂದಿಸಲಾಯಿತು

Comments are closed.