ಕರ್ನಾಟಕ

ರಾಜ್ಯದಲ್ಲಿ ಯಾರಿಗೂ ಕೊರೊನಾ ದೃಢಪಟ್ಟಿಲ್ಲ; ದೇಶದಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

Pinterest LinkedIn Tumblr


ಬೆಂಗಳೂರು/ಹೊಸದಿಲ್ಲಿ: ಭಾರತಕ್ಕೂ ಪ್ರವೇಶಿಸಿರುವ ಕೊರೊನಾ ವೈರಸ್‌ ಭೀತಿ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ದೇಶಾದ್ಯಂತ ಒಟ್ಟು 28 ಪ್ರಕರಣಗಳು ದೃಢವಾಗಿರುವ ಆಘಾತಕಾರಿ ಮಾಹಿತಿ ಬುಧವಾರ ಹೊರಬಿದ್ದಿದೆ. ಈ ಮಧ್ಯೆ, ಕೊರೊನಾ ವೈರಸ್‌ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಕರ್ನಾಟಕ ಸರಕಾರ ಎಚ್ಚರಿಕೆ ನೀಡಿದೆ.

ದೇಶದಲ್ಲಿ 16 ಮಂದಿ ಇಟಲಿಯ ಪ್ರವಾಸಿಗರು ಸಹಿತ 28 ಮಂದಿಗೆ ಕೋವಿಡ್‌-19 ಸೋಂಕು ತಗಲಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮಾಹಿತಿ ನೀಡಿದ್ದಾರೆ. ಜತೆಗೆ ಬುಧವಾರದಿಂದಲೇ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ ಎಂದು ಅವರು ಘೋಷಿಸಿದ್ದಾರೆ.

ಕೊರೊನಾ ಸೋಂಕು ಅಪಾಯಕಾರಿಯಾಗಿದ್ದು, ಅದನ್ನು ನಾವೆಲ್ಲರೂ ಒಂದಾಗಿ ಎದುರಿಸಬೇಕಿದೆ. ಸಮರೋಪಾದಿಯಲ್ಲಿ ಸಾಮೂಹಿಕವಾಗಿ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ವೈರಸ್‌ ವ್ಯಾಪಿಸುವುದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಹರ್ಷವರ್ಧನ್‌ ಹೇಳಿದ್ದಾರೆ.

ತೆಲಂಗಾಣದಲ್ಲಿ ಭಾರೀ ಜ್ವರದಿಂದ ಇಬ್ಬರು ವ್ಯಕ್ತಿಗಳು ಬಳಲುತ್ತಿರುವ ವಿಚಾರ ಗೊತ್ತಾಗಿದ್ದು, ಅವರ ಮೇಲೂ ನಿಗಾ ಇಡಲಾಗಿದೆ. ಸೋಂಕಿತ ವ್ಯಕ್ತಿಯ ಸುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳಲ್ಲೂ ಆರೋಗ್ಯ ಅಧಿಕಾರಿಗಳು ತಪಾಸಣೆ ಪ್ರಕ್ರಿಯೆ ಕೈಗೊಂಡು, ಸಾಮೂಹಿಕವಾಗಿ ವೈರಸ್‌ ಹಬ್ಬದಂತೆ ನೋಡಿಕೊಳ್ಳಲಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.

17 ಭಾರತೀಯರಿಗೆ ಸೋಂಕು
ವಿದೇಶದಲ್ಲಿರುವ 17 ಭಾರತೀಯರಿಗೆ ಕೊರೊನಾ ದೃಢಪಟ್ಟಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ಪೈಕಿ 16 ಪ್ರಕರಣಗಳು ಜಪಾನ್‌ನಲ್ಲಿ ಮತ್ತು 1 ಯುಎಇಯಲ್ಲಿ ವರದಿ ಯಾಗಿವೆ ಎಂದು ಲೋಕಸಭೆಗೆ ಸರಕಾರ ತಿಳಿಸಿದೆ.

ಭೀತಿ ಬೇಡ: ಪಂಕಜ್‌ ಪಾಂಡೆ
ಕರ್ನಾಟಕಕ್ಕೆ ಕೊರೊನಾ ವೈರಸ್‌ ಭಯ ಇಲ್ಲ. ಕೊರೊನಾ ಕುರಿತು ವದಂತಿ ಹಬ್ಬಿಸಿದರೆ ಕಠಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ವದಂತಿ ಕುರಿತು ಈಗಾಗಲೇ ಕೇರಳ ಹಾಗೂ ತೆಲಂಗಾಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಕೊರೊನಾ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಕೊರೊನಾ ಬಗೆೆY ಹರಡಿರುವ ವದಂತಿಗಳಿಗೆ ಜನಸಾಮಾನ್ಯರು ಕಿವಿಗೊಡಬೇಡಿ. ಯಾವುದೇ ಆತಂಕಕ್ಕೆ ಒಳಗಾಗುವ ಆವಶ್ಯಕತೆಯಿಲ್ಲ. ಸ್ವತ್ಛತೆ ಕಡೆ ಗಮನ ಹರಿಸಿ. ಬೆಂಗಳೂರಿಗೆ ಸಂಬಂಧಿಸಿ ದಂತೆ ಒಂದು ಕೊರೊನಾ ಪ್ರಕರಣ ಮಾತ್ರ ಹೈದರಾಬಾದ್‌ನಲ್ಲಿ ಪತೆೆಯಾಗಿದೆ. ರಾಜ್ಯದ ಮತ್ತೆಲ್ಲೂ ಕೊರೊನಾ ಪಾಸಿಟಿವ್‌ ಪತೆೆ¤ಯಾಗಿಲ್ಲ. ಹೈದರಾಬಾದ್‌ ಟೆಕ್ಕಿ ಜತೆಯಲ್ಲಿ ಸಂಪರ್ಕದಲ್ಲಿದ್ದ ಎಲ್ಲರನ್ನೂ ಆರೋಗ್ಯ ಇಲಾಖೆ ಸಂಪರ್ಕಿಸಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ. ಒಂದು ವೇಳೆ ಕೊರೊನಾ ವೈರಸ್‌ ಲಕ್ಷಣಗಳು ಕಂಡುಬಂದರೆ ಆರೋಗ್ಯ ಇಲಾಖೆಯ ಸಹಾಯವಾಣಿ 104ನ್ನು ಸಂಪರ್ಕಿಸುವಂತೆ ಆಯುಕ್ತರು ಸಲಹೆ ನೀಡಿದ್ದಾರೆ.

ಟೆಕ್ಕಿಗಳಿಗೆ ಸಲಹೆಗಳು
ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಐಟಿ-ಬಿಟಿ ಕಂಪೆನಿ ಗಳು, ಉದ್ಯೋಗಿಗಳಿಗೆ ಕೆಲವು ಸಲಹೆಗಳನ್ನು ನೀಡಿದೆ.

– ಕೊರೊನಾ ಹೆಚ್ಚಿರುವ ದೇಶಗಳಾದ ಚೀನ, ಇರಾನ್‌, ದಕ್ಷಿಣ ಕೊರಿಯ, ಇಟಲಿ, ಜಪಾನ್‌, ಪ್ರಯಾಣ ಮಾಡಬೇಡಿ.

– ಚೀನ, ದಕ್ಷಿಣ ಕೊರಿಯ, ಜಪಾನ್‌, ಇರಾನ್‌, ಇಟಲಿ, ಹಾಂಕಾಂಗ್‌, ಮಸ್ಕತ್‌, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಶ್ಯಾ, ನೇಪಾಲ, ಥಾçಲೆಂಡ್‌, ಸಿಂಗಾಪುರ, ತೈವಾನ್‌, ಯುಎಇ, ಕತಾರ್‌ಗಳಿಂದ ಬರುವ ಉದ್ಯೋಗಿಗಳು ವಿಮಾನ ನಿಲ್ದಾಣ ದಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿ.

– ಹೊರ ದೇಶದಿಂದ ಭಾರತ ಪ್ರವೇಶಿಸುವ ಉದ್ಯೋಗಿ ಗಳು ವೈದ್ಯಕೀಯ ಅಧಿಕಾರಿಗಳು ಮತ್ತು ವಲಸೆ ಅಧಿಕಾರಿಗಳ ಬಳಿ ವೈಯಕ್ತಿಕ ಹಾಗೂ ಪ್ರಯಾಣದ ಬಗ್ಗೆ ಮಾಹಿತಿ ನೀಡಬೇಕು.

– ಕೊರೊನಾ ಪೀಡಿತ ದೇಶಗಳಿಂದ ಕಳೆದ 14 ದಿನಗಳಿಂದ ಯಾರಾ ದರೂ ವಾಪಸ್‌ ಬಂದಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಜತೆಗೆ ಬೆಂಗಳೂರಿನಿಂದ ಕೊರೊನಾ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸುವವರು ಆರೋಗ್ಯ ಇಲಾಖೆಯ ಅನುಮತಿ ಪಡೆಯಬೇಕು.

Comments are closed.