ಮನೋರಂಜನೆ

ವಿವಾಹಿತನ ಪ್ರೀತಿಗೆ ಮೋಸ ಹೋಗಬೇಡಿ: ನೀನಾ ಗುಪ್ತಾ

Pinterest LinkedIn Tumblr


ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡು, ಮದುವೆಯಾದ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಸಿಲುಕಬೇಡಿ. ಆ ಕಷ್ಟಗಳೆಲ್ಲ ನನಗೆ ಗೊತ್ತು ಎಂದು ಹೇಳಿದ್ದಾರೆ.

ನೀನಾ ಗುಪ್ತಾ 80ರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟರ್ ರಿಚರ್ಡ್ ಜೊತೆ ರಿಲೇಶನ್ ಶಿಪ್‍ನಲ್ಲಿದ್ದರು. ತಮ್ಮ ಜೀವನದಲ್ಲಾದ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀನಾ ಶೇರ್ ಮಾಡಿಕೊಂಡಿದ್ದಾರೆ. ವಿವಾಹಿತನನ್ನು ಪ್ರೀತಿಸಿ ಹಲವು ಸಮಸ್ಯೆಗಳನ್ನು ನಾನು ಎದುರಿಸಿದ್ದೇನೆ. ಹಾಗಾಗಿ ಸ್ನೇಹಿತರು ಮತ್ತು ಆಪ್ತರಿಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.

ನೀನಾ ಗುಪ್ತಾ ಹೇಳಿದ್ದೇನು?
ಒಬ್ಬ ವಿವಾಹಿತ ಬಂದು ನಿಮ್ಮ ಬಳಿ ಹೆಂಡತಿ ಚೆನ್ನಾಗಿಲ್ಲ. ಇಬ್ಬರ ಸಂಬಂಧ ಸರಿಯಲ್ಲ ಎಂಬಿತ್ಯಾದಿ ಮಾತುಗಳನ್ನ ಹೇಳುತ್ತಾನೆ. ನೀವು ಆತ ಹೆಣೆದ ಪ್ರೇಮದ ಬಲೆಯಲ್ಲಿ ಬೀಳುತ್ತೀರಿ. ಮೊದಲು ಹೆಂಡತಿಯಿಂದ ದೂರ ಆಗ್ತೀನಿ ಎಂದು ಹೇಳಿದವ ಬೇರೆಯಾಗಲ್ಲ. ನೀವು ಬೇರೆ ಆಗುವಂತೆ ಸೂಚಿಸಿದ್ರೆ ಮಕ್ಕಳು, ಆಸ್ತಿ ಇನ್ನಿತರ ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾನೆ.

ಹೀಗೆ ಇಬ್ಬರ ಸಂಬಂಧ ಮುಂದುವರಿಯುತ್ತೆ. ನೀವು ಪ್ರಿಯಕರರ ಜೊತೆ ಲಾಂಗ್ ಹಾಲಿಡೇ ಹೋಗಬೇಕೆಂದಾಗ ಅವನು ಸುಳ್ಳು ಹೇಳಿ ಬರುತ್ತಾನೆ. ಒಂದು ಸಾರಿ ಅವನ ಜೊತೆ ಒಂದು ರಾತ್ರಿ ಕಳೆಯಬೇಕೆಂದಾಗ ಹೋಟೆಲಿನಲ್ಲಿ ಉಳಿದುಕೊಳ್ಳುತ್ತೀರಿ. ಹೀಗೆ ನೀವು ಅವನೊಂದಿಗೆ ಹಲವು ರಾತ್ರಿಗಳನ್ನು ಮದುವೆ ಮುಂಚೆಯೇ ಕಳೆಯುತ್ತೀರಿ. ಇಷ್ಟೆಲ್ಲ ಆದ್ಮೇಲೆ ಮದುವೆ ಆಗುವಂತೆ ಹೇಳಿದಾಗ ಅವನು ಕುಟುಂಬ ಬಿಟ್ಟು ಬರಲು ಹಿಂದೇಟು ಹಾಕುತ್ತಾನೆ. ಕೊನೆಗೂ ಪತ್ನಿಗೆ ವಿಚ್ಚೇಧನ ಸಹ ನೀಡದೇ ನಿಮ್ಮನ್ನೇ ದೂರ ಮಾಡುತ್ತೇನೆ ಎಂದು ಹೇಳುತ್ತಾನೆ. ಹಾಗಾಗಿ ವಿವಾಹಿತನ ಪ್ರೀತಿಯಲ್ಲಿ ಸಿಲುಕಬೇಡಿ ಎಂದು ಯುವತಿಯರಿಗೆ ನೀನಾ ಸಲಹೆ ನೀಡಿದ್ದಾರೆ.

Comments are closed.