
ಮುಂಬೈ: ಟಾಲಿವುಡ್ ಅರ್ಜುನ್ ರೆಡ್ಡಿ ಎಂದೇ ಖ್ಯಾತರಾಗಿರುವ ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿ ಅನನ್ಯ ಪಾಂಡೆ ಅವರನ್ನು ಅಪ್ಪಿಕೊಂಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ನಟಿ ಅನನ್ಯ ಪಾಂಡೆ ‘ಫೈಟರ್’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಅದರಲ್ಲಿ ವಿಜಯ್ ಬೈಕ್ ಚಲಾಯಿಸುತ್ತಿದ್ದರೆ, ಅನನ್ಯ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರು. ಚಿತ್ರತಂಡ ಮುಂಬೈನ ಬೀದಿಯಲ್ಲಿ ವಿಜಯ್ ಹಾಗೂ ಅನನ್ಯ ಅವರ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು. ಈ ಫೋಟೋ ನೋಡಿ ನೆಟ್ಟಿಗರು ಅಸಭ್ಯವಾಗಿ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡುತ್ತಿದ್ದರು.
ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ವಿಜಯ್ ಹಾಗೂ ಅನನ್ಯ ಬೋಟಿನಲ್ಲಿ ಹೋಗುತ್ತಿರುತ್ತಾರೆ. ವಿಜಯ್ ಅವರು ಮೊದಲು ಬೋಟ್ ಒಳಗೆ ಹೋಗಿ ಕುಳಿತಿರುತ್ತಾರೆ. ಈ ವೇಳೆ ಬಿಳಿ ಬಣ್ಣದ ಶಾರ್ಟ್ಸ್ ಹಾಗೂ ಟಾಪ್ ಧರಿಸಿದ ಅನನ್ಯ ಅಲ್ಲಿಗೆ ಬಂದಿದ್ದು, ಅಲ್ಲಿಯೇ ಕುಳಿತಿದ ವಿಜಯ್ ಅವರನ್ನು ಅಪ್ಪಿಕೊಂಡಿದ್ದಾರೆ. ವಿಜಯ್ ಅವರನ್ನು ಅಪ್ಪಿಕೊಂಡಾಗ ಅನನ್ಯ ವಿಚಿತ್ರವಾಗಿ ಎಕ್ಸ್ಪ್ರೆಶನ್ ಕೊಟ್ಟಿದ್ದು, ಅದನ್ನು ನೋಡಿದ ನೆಟ್ಟಿಗರು ಇಬ್ಬರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಫೈಟರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಟಾಲಿವುಡ್ ನಟಿ ಚಾರ್ಮಿ ಕೌರ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಅನನ್ಯ ಪಾಂಡೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಜೊತೆಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಖುಷಿಯಾಗುತ್ತಿದೆ. ಅಲ್ಲದೆ ಪೂರಿ ಜಗ್ಗನಾಥ್ ಹಾಗೂ ವಿಜಯ್ ದೇವರಕೊಂಡ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದರು.
Comments are closed.