ಕರ್ನಾಟಕ

10 ಲಕ್ಷ ಹಣ, 19ರ ಯುವತಿ ಜೊತೆ ಪರಾರಿಯಾದ 45ರ ಸ್ವಾಮೀಜಿ ಪತ್ತೆಗೆ ಹರಸಾಹಸ

Pinterest LinkedIn Tumblr


ಕೋಲಾರ: ತಾಲೂಕಿನ ಹೊಳಲಿ ಗ್ರಾಮದ 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿರುವ ದತ್ತಾತ್ರೇಯ ಅವಧೂತ ಸ್ವಾಮೀಜಿ, ಬಂಧನ ಭೀತಿಯಿಂದ ತಿರುಪತಿ ಬಿಟ್ಟು ಹಾವೇರಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.

ಕಳೆದ ಫೆಬ್ರವರಿ 24ರಂದು ಹೊಳಲಿ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿ, ಆಂಧ್ರದ ತಿರುಪತಿಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ವಿಶೇಷ ತಂಡ ಆಂಧ್ರಕ್ಕೆ ತೆರಳಿದ ಮಾಹಿತಿ ಸಿಗುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿದ್ದಾನೆ.

ಬಂಧನ ಭೀತಿಯಿಂದ ಪದೇ ಪದೇ ಸ್ವಾಮೀಜಿ ಸ್ಥಳ ಬದಲಾಯಿಸುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಗಣಿಸಿದೆ. ಪೊಲೀಸರು ಸ್ವಾಮೀಜಿಯ ಮೊಬೈಲ್‌ ಫೋನ್ ಲೊಕೇಷನ್‌ ಆಧಾರದ ಮೇಲೆ ಆತನ ಜಾಡು ಹಿಡಿದು ತಿರುಪತಿಗೆ ಹೋಗುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿರುವ ಸ್ವಾಮೀಜಿ, ಅಲ್ಲಿಂದ ದಾವಣಗೆರೆ, ಬಳಿಕ ಹಾವೇರಿಗೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಸ್ವಾಮೀಜಿ ಬಂಧಿಸಲು ಬೆನ್ನು ಬಿದ್ದಿರುವ ವಿಶೇಷ ಪೊಲೀಸ್‌ ತಂಡವು ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದು, ಹಾವೇರಿಯಲ್ಲಿರುವ ಸ್ವಾಮೀಜಿಯ ಸ್ನೇಹಿತರು ಹಾಗೂ ಆಪ್ತರ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಪರಾರಿಯಲ್ಲಿರುವ ಸ್ವಾಮೀಜಿ ಭೀಮಲಿಂಗೇಶ್ವರ ದೇವಾಲಯಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಸುಮಾರು 10 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

Comments are closed.