ಮನೋರಂಜನೆ

ಬಾಲಿವುಡ್ ಜೋಡಿಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ

Pinterest LinkedIn Tumblr


ಬಾಲಿವುಡ್ ನಟಿ, ನಿರ್ದೇಶಕಿ ಕೊಂಕಣ ಸೇನ್ ಶರ್ಮಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಟ ರಣವೀರ್ ಷೋರೆ ಅವರನ್ನು 2010ರಲ್ಲಿ ಕೊಂಕಣ ಸೇನ್ ಮದುವೆಯಾಗಿದ್ದರು. ಟ್ರಾಫಿಕ್ ಸಿಗ್ನಲ್, ಮಿಕ್ಸ್‌ಡ್ ಡಬಲ್ಸ್, ಆಜಾ ನಾಚ್ಲೆ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಈ ಜೋಡಿ ಅಭಿನಯಿಸಿದೆ.

ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮದುವೆ ಮೂಲಕ ಈ ಜೋಡಿ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು. ಇದಾದ ಮೇಲೆ ಸಾಂಸಾರಿಕ ಭಿನ್ನಾಭಿಪ್ರಾಯಗಳ ಕಾರಣ 2015ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾ ಪರಸ್ಪರ ಒಪ್ಪಿಗೆ ಮೇರೆಗೆ ದೂರ ಸರಿಯುತ್ತಿರುವುದಾಗಿ ತಿಳಿಸಿತ್ತು ಈ ಜೋಡಿ.

ಇವರ ದಾಂಪತ್ಯದ ಫಲವಾಗಿ ಇವರಿಗೆ ಆರು ವರ್ಷದ ಮಗ ಹರೂನ್ ಇದ್ದಾನೆ. ಇಬ್ಬರೂ ದೂರ ಇದ್ದರೂ ಮಗನ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ಸ್ಟಾರ್ ಜೋಡಿ 2015ರಲ್ಲಿ ಪರಸ್ಪರದ ಒಪ್ಪಿಗೆ ಮೇರೆ ದೂರ ಇದ್ದರೂ ಇದುವರೆಗೂ ವಿಚ್ಛೇದನ ಮಾತ್ರ ತೆಗೆದುಕೊಂಡಿರಲಿಲ್ಲ.

ಇದೀಗ ಈ ಜೋಡಿ ಅಧಿಕೃತವಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಂಡಿದ್ದು ಆರು ತಿಂಗಳಲ್ಲಿ ಅಧಿಕೃತವಾಗಿ ವಿಚ್ಛೇದನ ಪತ್ರಗಳು ಇವರ ಕೈ ಸೇರಲಿವೆ ಎಂದಿವೆ ಮೂಲಗಳು. ಇದಕ್ಕೂ ಮುನ್ನ ಕೊಂಕಣ, ರಣವೀರ್ ಇಬ್ಬರೂ ಕೌನ್ಸೆಲಿಂಗ್ ತೆಗೆದುಕೊಂಡಿದ್ದರು. ಆದರೂ ವಿಚ್ಛೇದನವೇ ಸೂಕ್ತ ಎಂಬ ನಿರ್ಧಾರಕ್ಕೆ ಈ ಜೋಡಿ ಬಂದಿದೆ.

Comments are closed.