ಕರಾವಳಿ

ಚಿನ್ನ ಸ್ಮಗ್ಲಿಂಗ್: ಕುಂದಾಪುರ-ಬೈಂದೂರಲ್ಲಿ  13 ಮಂದಿ, 55 ಲಕ್ಷದ ಚಿನ್ನ ವಶಕ್ಕೆ

Pinterest LinkedIn Tumblr

ಕುಂದಾಪುರ : ಕೇರಳ ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ  11 ಮಂದಿಯನ್ನು ಕುಂದಾಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಭಟ್ಕಳ ಮೂಲದವರಾದ ನವೀದ್ (23), ಮಹಮ್ಮದ್ ಕಲೀಲ್ ಕಾಝಿಯಾ (62), ಮಹಮ್ಮದ್ ಅಸೀಮ್ (23), ಫೈಝ್ ಅಹಮ್ಮದ್ ಮವಾನ್(29), ಮಹಮ್ಮದ್ ಅದ್ನಾನ್(25) ಬಂಧಿತರು. ಬಂಧಿತರಿಂದ 1152.47 ಗ್ರಾಂ ತೂಕದ ಚಿನ್ನದ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮುಜ್ತಾಬಾ ಕಾಸೀಮ್, ಉಮೈರ್ ಅಹಮ್ಮದ್, ವಾಸಿಫ್ ಅಹಮದ್, ಮುಝಾಮಿಲ್, ಜಮೀಲ್, ಮೀರಾ ಸಮೀರ್ ಎನ್ನುವರನ್ನು ವಿಚಾರಣೆ ಸಲುವಾಗಿ ಮಂಗಳುರಿನ ಕಮಿಷನರ್ ಆಫ್ ಕಸ್ಟಮ್ಸ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಸ್ವಾಧೀನ ಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 46 ಲಕ್ಷವಾಗಿದ್ದು ವಾಹನಗಳ ಒಟ್ಟು ಮೌಲ್ಯ 10 ಲಕ್ಷ.

ದುಬೈನಿಂದ ಕ್ಯಾಲಿಕಟ್ ಏರ್ಪೋರ್ಟಿಗೆ ಬಂದ ಭಟ್ಕಳ ಮೂಲದ ವ್ಯಕ್ತಿಗಳು ಕ್ಯಾಲಿಕಟ್ ನಿಂದ ಮಂಗಳುರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಭಟ್ಕಳಕ್ಕೆ ಟವೇರಾ ಕಾರಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬೈಂದೂರು ರೈಲ್ವೆ ಸ್ಟೇಶನ್ ಬಳಿ ಬೈಂದೂರು ಸಿಪಿಐ ಸುರೇಶ್ ನಾಯಕ್ ಅವರು ಅಕ್ರಮವಾಗಿ ಸಾಗಿಸುತ್ತಿದ್ದ 9 ಲಕ್ಷ ಮೌಲ್ಯದ 231 ಗ್ರಾಂ ಚಿನ್ನವನ್ನು ಇಬ್ಬರು ಆರೋಪಿಗಳ ಸಹಿತ ವಶಕ್ಕೆ ಪಡೆದಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಅವರ ನಿರ್ದೇಶನದಂತೆ, ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜೈ ಶಂಕರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Comments are closed.