ಉಡುಪಿ: ಆರೋಪಿತರಾದ ಮುತ್ತಪ್ಪ @ ಸುರೇಶ್, ಶೇಖ್ ರಿಯಾಜ್ ಅಹಮ್ಮದ್ ಮತ್ತು ಸುದರ್ಶನ್ ಇವರು 2010 ರ ಜನವರಿ 21 ರಂದು ರಾತ್ರಿ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಶಿರ್ವ ಗ್ರಾಮದ ಜತ್ರಬೆಟ್ಟು ಎಂಬಲ್ಲಿರುವ ರೇಮಂಡ್ ಕ್ಯಾಬ್ರಾಲ್ರವರ ಮನೆಯ ಹಿಂಭಾಗ ಬಾಗಿಲಿನ ಕೊಂಡಿ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯ ಕಪಾಟುಗಳು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಶಿರ್ವ ಪೊಲೀಸ್ ನಿರೀಕ್ಷಕ ಎನ್.ಸಿ ಗಣೇಶ್, ಪ್ರಕರಣ ದಾಖಲಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಈ ಪ್ರಕರಣವು ಉಡುಪಿ 3ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಹಂತೇಶ್ ಭೂಸಗೋಳರವರು 1ನೇ ಆರೋಪಿ ಮುತ್ತಪ್ಪ @ ಸುರೇಶ್ಗೆ 9,000 ರೂ. ದಂಡ ಮತ್ತು 5 ವರ್ಷ 10 ತಿಂಗಳ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ಪ್ರಕರಣ ನಡೆಸಿರುತ್ತಾರೆ.
Comments are closed.