ರಾಷ್ಟ್ರೀಯ

ನದಿಗೆ ಉರುಳಿ ಬಿದ್ದ ಬಸ್: ಮದುವೆಗೆ ಹೊರಟ 25 ಮಂದಿ ಸಾವು

Pinterest LinkedIn Tumblr


ಕೋಟಾ(ರಾಜಸ್ಥಾನ್): ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಾಯಗೊಂಡಿರುವ ಘಟನೆ ಬುಧವಾರ ರಾಜಸ್ಥಾನದ ಬುಂದಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟಾ ಪ್ರದೇಶದಿಂದ ಬುಧವಾರ ಬೆಳಗ್ಗೆ ಸ್ವಾಮಿ ಮಾಧುಪುರ್ ನಲ್ಲಿ ನಡೆಯಲಿರುವ ಮದುವೆ ಸಮಾರಂಭಕ್ಕೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಅತೀ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿರುವ ಘಟನೆ ಪಾಪ್ಡಿ ಗ್ರಾಮದ ಸಮೀಪ ನಡೆದಿದೆ ಎಂದು ಲಾಖೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಂದರ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಬಸ್ ನಲ್ಲಿ ಒಟ್ಟು 28 ಜನರಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಬಸ್ ಮೆಜ್ ನದಿಗೆ ಉರುಳಿ ಬಿದ್ದಿತ್ತು. ಈ ಸೇತುವೆಗೆ ಯಾವುದೇ ತಡೆಗೋಡೆ ಕಟ್ಟಿರಲಿಲ್ಲವಾಗಿತ್ತು ಎಂದು ಕುಮಾರ್ ವಿವರಿಸಿದ್ದಾರೆ. ಹದಿಮೂರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 12 ಜನರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ಘಟನೆಯಲ್ಲಿ 12 ಪುರುಷರು, ಹತ್ತು ಮಂದಿ ಮಹಿಳೆಯರು ಹಾಗೂ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ.ಗಾಯಗೊಂಡವರನ್ನು ಲಾಖೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.