ಕರಾವಳಿ

ದೇಶದ ಭವಿಷ್ಯಕ್ಕೆ ಶ್ರೀ ನರೇಂದ್ರ ಮೋದಿಯಂತಹ ಪ್ರಧಾನಿಯ ನಾಯಕತ್ವ ಅಗತ್ಯ: ಶ್ರೀ ಚಂದ್ರಶೇಖರ ಸ್ವಾಮೀಜಿ

Pinterest LinkedIn Tumblr

ಮುಂಬಾಯಿ : “ನನಗೆ ಕೊನೆಯ ಕಾರ್ಯಕ್ರಮ ಎನ್ನುವುದೇ ಇಲ್ಲ, ನನ್ನ ಜೀವನಕ್ಕೆ ಪೂರ್ಣ ವಿರಾಮವೇ ಇಲ್ಲ “”ಎಂಬ ಮಾತನ್ನು ಹೇಳಿರುವ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಓರ್ವ ಸಂತನ ಗುಣವುಳ್ಳ ನಾಯಕ. ಛಲವಂತಿಕೆ, ಆಶಾವಾದವುಳ್ಳ ನಾಯಕನಿಂದ ಮಾತ್ರ ಇಂತಹ ಮಾತು ನಿರೀಕ್ಷೆ ಮಾಡಲು ಸಾಧ್ಯ. ಇಂತಹ ನಾಯಕ ನಮ್ಮ ದೇಶವನ್ನು ಜಗತ್ತಿನಲ್ಲಿ ದೇಶದ ಭವಿಷ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.ಅವರು

ಮುಂಬಯಿಯ ಬಾಂದ್ರಾ ಕುರ್ಲಾ ಬಳಿಯ ಡೈಮಂಡ್ ಡಿಸ್ಟಿಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಲ್ಯಾನ್ಸ ಪ್ರಿನ್ಸ್ ಬರೆದ “”ಮೋದಿ ಇಫೆಕ್ಟ್”” ಎಂಬ ಪುಸ್ತಕದ ಮರುಮುದ್ರಣವನ್ನು ಬಿಜೆಪಿಯ ಪಕ್ಷದ ಮುಂಬಯಿ ವಿಭಾಗದ ಉಪಾಧ್ಯಕ್ಷ ಕಿರೀಟಿ ಬನ್ಸಾಲ್ ಅವರು ಸ್ವಾಮೀಜಿಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ದೃಷ್ಟಿಕೋನ, ಪರಿಕಲ್ಪನೆ ಮತ್ತು ನಿಗದಿತ ಅವಧಿಯಲ್ಲಿಯೇ ಪೂರೈಸುವ ನೈಪುಣ್ಯತೆ ಮೋದಿಯವರನ್ನು ಉತ್ತಮ ರಾಜನೀತಿಜ್ಞರನ್ನಾಗಿ ಮಾಡಿವೆ. ರಾಜಕೀಯದ ಹಿನ್ನೆಲೆಯಲ್ಲಿದ್ದುಕೊಂಡೂ ಬರೀ ಚುನಾವಣಾ ದೃಷ್ಟಿಯಿಂದ ಚಿಂತಿಸದೆ ಮುಂದಿನ ಜನಾಂಗದ ಬಗೆಗಿನ ಮೋದಿ ಅವರ ಚಿಂತನೆ ನಿಜಕ್ಕೂ ಅನನ್ಯ ಎಂದು ಸ್ವಾಮೀಜಿ ಹೇಳಿದರು.

ಮೋದಿ ಅವರಲ್ಲಿನ ನಾಯಕ ಎಂಬುದು ಅಂತರಂಗಿಕ ಗುಣಧರ್ಮ. ಅದು ಅವರ ಮೂಲಾಧಾರದಲ್ಲೇ ಹುಟ್ಟಿದೆ. ಅದು ಪ್ರತೀ ಕ್ಷಣವೂ ತನ್ನ ಅಸ್ಮಿತೆಯನ್ನು ಸಾದರಪಡಿಸುತ್ತಾ ಬಂದಿದೆ. ಅವರ ನಾಯಕತ್ವದ ಅಂತಸ್ಸತ್ವ ಅವರ ಒಡಲಾಳದಿಂದ ಅಕ್ಷರಶಃ ಸ್ಪೋಟಗೊಂಡು ಹೊರಪ್ರಪಂಚವನ್ನು ತುಂಬಿಕೊಂಡಿದೆ ಇದರಿಂದಾಗಿಯೇ ಪ್ರಪಂಚದಲ್ಲಿ ಮೋದಿ ಅವರ ನಾಯಕತ್ವ ಮತ್ತು ಆತನನ್ನು ಒಪ್ಪಿದ ಸಮೂಹ ಹುಟ್ಟಿಕೊಂಡಿದೆ ಎಂದರು.

ಮೋದಿ ಅವರಲ್ಲೊಬ್ಬ ಸಂತನಿದ್ದಾನೆ. ಏಕೆಂದರೆ ಅವರು ಸ್ವತಃ ಏಕಾಂತಪ್ರಿಯ. ಅವರು ಏಕಾಂಗಿಯಾಗಿ ಅಂತರ್ಮುಖಿ. ತಾನು ಕಂಡದ್ದನ್ನೆಲ್ಲವನ್ನೂ ಮೊದಲಾಗಿ ತನ್ನೊಳಗೆ ಆವಾಹಿಸಿಕೊಂಡ ವ್ಯಕ್ತಿ. ಅಂತಶಕ್ತಿ ಉದ್ದೀಪಿಸಿಕೊಳ್ಳುತ್ತಾ ಅದನ್ನು ವಿಸ್ತರಿಸಿಕೊಂಡ ಸಂತ. ಆಮೇಲೆ ಹೊರಗಣ ಮಂದಿಯ ಒಳಗಣನವನಾದರು ಎಂದರು.

ಒಟ್ಟಾಗಿ ಮುನ್ನುಗ್ಗಿದರೆ ಮಾತ್ರಾ ದೇಶವೂ ಮುನ್ನಡೆದೀತು ಎಂಬುದನ್ನು ಅವರು ಮೊನ್ನೆ ತಾನೇ ಹೇಳಿದ್ದು ೧೨೫ ಕೋಟಿ ಹೆಜ್ಜೆಗಳು ಒಟ್ಟಾಗಿ ಸಾಗಿದರೆ ದೇಶ ೧೨೫ ಕೋಟಿಹೆಜ್ಜೆ ಮುಂದೆ ಹೋಗುತ್ತದೆ ಎಂಬ ಮಾತಿನಲ್ಲಿ ಭರವಸೆಯ ಮಹಾಪ್ರವಾಹ ಹರಿದಿದೆ.

ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ದೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಮೋದಿ ಸಾದರಪಡಿಸಿದ್ದಾರೆ.ಅವರಂಥ ನಿಷ್ಕಳಂಕ ಸೇವಾಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ, ಅಪಾರ ಪ್ರೀತಿ ಗಳಿಸಿರುವ ಏಕ ನಾಯಕನನ್ನು ಭಾರತ ಮಹಾತ್ಮಾ ಗಾಂಧೀ ನಂತರ ಕಂಡದ್ದು ಈಗಲೇ ಎಂದರು.

ಕಾರ‍್ಯಕ್ರಮದಲ್ಲಿ ಮುಂಬಯಿಯ ಹೆಸರಾಂತ ವಜ್ರೋದ್ಯಮಿ ಸ್ಮಿತೇಶ್ ಮಿತ್ತಲ್ ಉದ್ಯಮಿ ಪರ್ವತ ಆರ್. ಶೆಟ್ಟಿ, ಶ್ರೀ ಚಂದ್ರಶೇಖರ ಸ್ವಾಮಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ಸಂಚಾಲಕರಾದ ಪುನಿತ್ ಕೃಷ್ಣ. ರಿತೇಶ್ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.

__ ದಿನೇಶ್ ಕುಲಾಲ್

Comments are closed.