ರಾಷ್ಟ್ರೀಯ

ಟ್ರಂಪ್ ಮಡದಿಗಿಂತ ಮಗಳ ಉಡುಪಿನ ಕುರಿತು ವ್ಯಾಪಕ ಚರ್ಚೆಯಾಗಿದ್ದು ಯಾಕೆ?

Pinterest LinkedIn Tumblr


ಅಹಮದಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜತೆ ಅವರ ಪತ್ನಿ ಮೆಲಾನಿಯಾ ಟ್ರಂಪ್‌ ಮತ್ತು ಅವರ ಪುತ್ರಿ ಹಾಗೂ ಹಿರಿಯ ಸಲಹೆಗಾರ್ತಿ ಇವಾಂಕಾ ಟ್ರಂಪ್‌ ಧರಿಸಿದ್ದ ಉಡುಪು ಕುತೂಹಲದ ಚರ್ಚೆಗೆ ಗ್ರಾಸವಾದವು. ಅದರಲ್ಲೂ ಪುತ್ರಿ ಇವಾಂಕಾ ಧರಿಸಿದ್ಧ ಉಡುಪಿನ ಬಗ್ಗೆ ಹೆಚ್ಚು ಚರ್ಚೆ ನಡೆಯಿತು.

ಇವಾಂಕಾ: ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿತ್ತಿರುವ ಇವಾಂಕಾ ಈ ಬಾರಿ ತಮ್ಮ ಧಿರಿಸಿನ ಮೂಲಕ ವಿಶೇಷವಾಗಿ ಚರ್ಚೆಗೆ ಗ್ರಾಸವಾಗಿದ್ದು ಸುಳ್ಳಲ್ಲ. ಇವಾಂಕಾ ಟ್ರಂಪ್‌ ಕೆಂಪು ಬಣ್ಣದ ಹೂವಿನ ವಿನ್ಯಾಸದ ಮಿಡಿ ಧರಿಸಿ ಗಮನ ಸೆಳೆದರು. ಇದೇ ಡ್ರೆಸ್‌ ಅನ್ನು ಅವರು 2019ರ ಸೆಪ್ಟೆಂಬರ್‌ ತಿಂಗಳಲ್ಲಿ ಅರ್ಜೆಂಟೀನಾ ಪ್ರವಾಸದ ಸಂದರ್ಭವೂ ಧರಿಸಿದ್ದರು ಎಂದು ಚಿತ್ರ ಸಮೇತ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಮೂಲದ ಪ್ರತಿಷ್ಠಿತ ವಸ್ತ್ರ ವಿನ್ಯಾಸ ಸಂಸ್ಥೆ ಪ್ರೊಯಂಜಾ ಶೌಲರ್‌ ಈ ಉಡುಪು ಸಿದ್ಧಪಡಿಸಿದೆ. ಇದರ ಬೆಲೆ 1.7 ಲಕ್ಷ ರೂ.!

ಮೆಲೆನಿಯಾ: ಅಮೆರಿಕ ಅಧ್ಯಕ್ಷ ಟ್ರಂಪ್‌ ಪತ್ನಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡಿದ ಮೆಲಾನಿಯಾ ಬಿಳಿಬಣ್ಣದ ಜಂಪ್‌ಸೂಟ್‌ ಮತ್ತು ಬಂಗಾರ ಬಣ್ಣದ ದಡಿಯಚ್ಚು ಹೊಂದಿದ ಹಸಿರು ರೇಷ್ಮೆಯ ಸೊಂಟಪಟ್ಟಿ ಮತ್ತು ಬಿಳಿ ಬಣ್ಣದ ಶೂ ಧರಿಸಿ ಗಮನ ಸೆಳೆದರು. ಫ್ರೆಂಚ್‌ ವಸ್ತ್ರ ವಿನ್ಯಾಸಕಾರ ಹರ್ವೆ ಪಿಯಾರೆ ಸಿದ್ಧಪಡಿಸಿದ ಈ ಜಂಪ್‌ಸೂಟ್‌ಗೆ ಭಾರತದ ನಂಟು ಇದೆ ಎನ್ನುವುದು ವಿಶೇಷ. ಅದಕ್ಕೆ ಬಳಸಿದ ವಸ್ತ್ರ ಸಾಮಗ್ರಿಯನ್ನು ಪಿಯಾರೆ ತಮ್ಮ ಗೆಳೆಯನ ಮೂಲಕ ಭಾರತದಿಂದ ತರಿಸಿಕೊಂಡಿದ್ದರು.

ಟ್ರಂಪ್‌: ಈ ವೇಳೆ ಟ್ರಂಪ್‌ ಕಪ್ಪು ಬಣ್ಣದ ಸೂಟ್‌ ಮತ್ತು ಬಟರ್‌ಕಪ್‌ ಹಳದಿ ಟೈ ಧರಿಸಿ ಮಿಂಚಿದರು. ಪಿಯಾರೆ ಅವರು ಈ ಹಿಂದಿನ ಅಮೆರಿಕದ ಅಧ್ಯಕ್ಷರ ಪತ್ನಿಯರಾದ ಲಾರಾ ಬುಷ್‌, ಹಿಲರಿ ಕ್ಲಿಂಟನ್‌ ಮತ್ತು ಮಿಚೆಲ್‌ ಒಬಾಮ ಅವರಿಗೂ ವಸ್ತ್ರ ವಿನ್ಯಾಸಕರಾಗಿದ್ದರು.

Comments are closed.