ವಿಜಯಪುರ: ಪಾಕ್ ಪರ ಪ್ರೇಮ ತೋರಿ ದೇಶದ್ರೋಹ ಆರೋಪದಲ್ಲಿ ಬೆಂಗಳೂರಿನಲ್ಲಿಬ್ಬರು ಜೈಲು ಸೇರಿದ ಬೆನ್ನಲ್ಲೇ ವಿಜಯಪುರ ಜಿಲ್ಲೆಯಲ್ಲಿ ಯುವಕ ಇಂಥದ್ದೇ ಯಡವಟ್ಟು ಮಾಡಿಕೊಂಡು ಪೊಲೀಸರ ಅತಿಥಿಯಾಗಿರುವ ಘಟನೆ ಜರುಗಿದೆ.
ಫೇಸ್ ಬುಕ್ ನಲ್ಲಿ A-2 -Z ಹೆಸರಿನ ಅಕೌಂಟನಲ್ಲಿ ಬರೆಯಲಾಗಿದ್ದ “ಲವ್ ಯೂ ಪಾಕ್ ಆರ್ಮಿ” ಎನ್ನುವ ಪೋಸ್ಟ್ ನ್ನು ಜಿಲ್ಲೆಯ ತಾಳಿಕೋಟೆ ಪಟ್ಟಣ ನಿವಾಸಿ ಮೆರು ಬ್ಯಾಗವಾಟ್ ಯುವಕ ಶೇರ ಮಾಡಿದ್ದ.
ಪಾಕ್ ಆರ್ಮಿ ಪರ ತಾಳಿಕೋಟಿ ಯುವಕ ಶೇರ್ ಮಾಡಿದ್ದ ಬರಹ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು.
ಫೆ.22 ರಂದು A-2-Z ಖಾತೆಯಲ್ಲಿ ‘ಲವ್ ಯೂ ಪಾಕ್ ಆರ್ಮಿ’ ಎಂದು ಬರೆದ ಪೋಸ್ಟ ಹಾಕಲಾಗಿತ್ತು. ಈ ಪೋಸ್ಟನ್ನು ತಾಳಿಕೋಟಿಯ ಮೇರು ಬ್ಯಾಗವಾಟ್ ತನ್ನ ಖಾತೆಯಿಂದ ಹಂಚಿಕೊಂಡಿದ್ದ.
ಪಾಕ್ ಪ್ರೇಮಿ ಪೋಸ್ಟ್ ಶೇರ್ ಮಾಡಿದ್ದ ತಾಳಿಕೋಟಿ ಪಟ್ಟಣದ ಮೇರು ಬ್ಯಾಗವಾಟ್ ಎಂಬ ಯುಕನನ್ನು ವಶಕ್ಕೆ ಪಡೆದಿರುವ ಮುದ್ದೇಬಿಹಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Comments are closed.