ರಾಷ್ಟ್ರೀಯ

ಫೆ.25ಕ್ಕೆ ಪ್ರಥಮ 5G ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ

Pinterest LinkedIn Tumblr


ನವದೆಹಲಿ: ಚೀನಾ ಮೂಲದ IQ003 ಕಂಪೆನಿ 5G ಸ್ಮಾರ್ಟ್ ಫೋನ್ ಅನ್ನು ಉತ್ಪಾದಿಸಿದೆ. ಈ ಸ್ಮಾರ್ಟ್ ಫೆಬ್ರವರಿ 25ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.ಆ ಮೂಲಕ ದೇಶದ ಮೊದಲ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

IQ003 ಕಂಪೆನಿ ಚೀನಾದ ಖ್ಯಾತ ಸ್ಮಾರ್ಟ್ ಪೋನ್ ತಯಾರಕ ಕಂಪೆನಿಯಾಗಿರುವ ವಿವೋ ಸ್ಮಾರ್ಟ್ ಫೋನಿನ ಸಬ್ ಬ್ರ್ಯಾಂಡ್ ಆಗಿದೆ. ಇದೀಗ ತನ್ನ ಮೂಲ ಕಂಪೆನಿಯಿಂದ ಬೇರ್ಪಟ್ಟು ನೂತನ ಸ್ಮಾರ್ಟ್ ಫೋನ್ ಉತ್ಪಾದಿಸಿದೆ. ಸದ್ಯ ಈ ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ.

ಮಾಹಿತಿಗಳ ಪ್ರಕಾರ ಈ ಸ್ಮಾರ್ಟ್ ಫೋನ್ 6.4 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಅಮೋಲ್ಡ್ ಡಿಸ್ ಪ್ಲೇ ಹೊಂದಿದ್ದು . 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇರಲಿದೆ. ಇದರ ಪ್ರೊಸೆಸರ್ ಕ್ವಾಲ್ ಕ್ವಾಂ ಸ್ನ್ಯಾಪ್ ಡ್ರ್ಯಾಗನ್ 865 ಸಾಮಾರ್ಥ್ಯ ಹೊಂದಿದೆ. ಮಾತ್ರವಲ್ಲದೆ ಆ್ಯಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದಿವೆ.

ಈಗ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ ಫೋನ್ ಮೂರು ಅವೃತ್ತಿಗಳಲ್ಲಿ ಅಂದರೆ 6GB, 8GB, 12GB ಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಸ್ಟೋರೇಜ್ ಆಯ್ಕೆ 128GB ಮತ್ತು 256GB ಗಳಲ್ಲಿ ಇರಲಿದೆ.

ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕ್ವಾಡ್ ರೇರ್ ಕ್ಯಾಮಾರವನ್ನು ನೀಡಲಾಗಿದೆ. ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮಾರ ಸೇರಿದಂತೆ ಮೂರು ಕ್ಯಾಮಾರಗಳು ಇರಲಿವೆ. ಸೆಲ್ಫಿ ಕ್ಯಾಮಾರಾ 16ಎಂಎಪಿ ಇರಲಿದೆ. ಈ ಸ್ಮಾರ್ಟ್ ಪೋನಿನ ಬ್ಯಾಟರಿ ಶಾಮಾರ್ಥ್ಯ 4,400mAh.

ವರದಿಗಳ ಪ್ರಕಾರ ಈ ಸ್ಮಾರ್ಟ್ ಫೋನಿನ ಮೂಲ ಬೆಲೆ 45,000 ಎಂದು ಅಂದಾಜಿಸಲಾಗಿದೆ. 4ಜಿ ಮಾದರಿಗಳ ಬೆಲೆ 35,000 ಎಂದು ಹೇಳಲಾಗಿದೆ.

ದೇಶದ ಮೊದಲ 5ಜಿ ಸ್ಮಾರ್ಟ್ ಫೋನ್ ಎಂಬ ಕಾರಣಕ್ಕಾಗಿ ಭಾರೀ ಕುತೂಹಲ ಕೆರಳಿಸಿದೆ. ಈ ಪೋನ್ ವಾಲ್ಕೆನೋ ಆರೆಂಜ್, ಟೊರ್ನಾಡೋ ಬ್ಲ್ಯಾಕ್, ಕ್ವಾಂಟಂ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

Comments are closed.