ಅಂತರಾಷ್ಟ್ರೀಯ

ಸೆಕ್ಸ್ ವೇಳೆ ಬ್ಲೇಡ್ ಬಳಸಿದ ಪತಿ: ಗರ್ಭಿಣಿ ಪತ್ನಿ ಸಾವು

Pinterest LinkedIn Tumblr


ಬ್ರೆಜಿಲ್: ಪತಿಯೋರ್ವ ಸೆಕ್ಸ್ ವೇಳೆ ಬ್ಲೇಡ್ ಬಳಸಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಕೊಲೆಗೆ ಪತಿಯ ಅಸೂಯೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

21 ವರ್ಷದ ಮಾರ್ಸೆಲೋ ಅರೌವೋ, 22 ವರ್ಷದ ಪತ್ನಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಫ್ರಾನ್ಸಿಸ್ ಡಾಸ್ ಸಂತೊಸ್ ಕೊಲೆಯಾದ ಮಹಿಳೆ. ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಗುವಿದೆ. ಈಗ ಫ್ರಾನ್ಸಿಸ್ ಮೂರನೇ ಬಾರಿ ಗರ್ಭವತಿಯಾಗಿದ್ದರು. ಮೂರನೇ ಮಗು ಪಡೆದ್ರೆ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ನಮಗೆ ಇಬ್ಬರೇ ಮಕ್ಕಳಿರಲಿ ಎಂದು ಮಾರ್ಸೆಲೋ ಹೇಳುತ್ತಿದ್ದನು. ಆದ್ರೆ ಇನ್ನೊಂದು ಮಗು ಬೇಕೆಂಬ ಆಸೆ ಇತ್ತು. ಈ ವಿಷಯವಾಗಿ ಇಬ್ಬರ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು.

ಎರಡು ದಿನಗಳ ಹಿಂದೆ ಪತ್ನಿ ಜೊತೆ ದೈಹಿಕ ಸಂಪರ್ಕ ಹೊಂದುವ ವೇಳೆ ಬ್ಲೇಡ್ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಪತ್ನಿಯ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಾನೆ. ಬ್ಲೇಡ್ ನಿಂದ ಪತ್ನಿಯ ಮುಖ ಮತ್ತು ದೇಹದ ಇತರೆ ಭಾಗಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ತನ್ನ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದನು ಎಂದು ವರದಿಯಾಗಿದೆ.

ಡಿಸೆಂಬರ್ 22ರಂದು ದಂಪತಿ ಕ್ರಿಸ್ಮಸ್ ಆಚರಣೆಯ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಆದ್ರೆ ವಿಷಯ ಮೂರನೇ ಮಗು ಬೇಕು ಅಥವಾ ಬೇಡ ಎಂಬುದರತ್ತ ತಿರುಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಅಂದಿನಿಂದ ದಂಪತಿ ಬೇರೆ ಬೇರೆ ಕೋಣೆಯಲ್ಲಿ ಮಲಗಲು ಆರಂಭಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಘಟನೆ ಬಳಿಕ ತಪ್ಪೊಪ್ಪಿಕೊಂಡಿರುವ ಪತಿ ಜೈಲು ಸೇರಿದ್ದಾನೆ. ಮೂರನೇ ಮಗುವಿನ ಆಸೆಯಲ್ಲಿದ್ದ ತಾಯಿ ಪ್ರಾನ್ಸಿಸ್ ಇರೋ ಮುದ್ದು ಮಕ್ಕಳನ್ನು ಅಗಲಿದ್ದಾರೆ. ಗಂಡ-ಹೆಂಡ್ತಿ ಜಗಳದಲ್ಲಿ ಮಕ್ಕಳು ಅನಾಥರಾದ್ರು ಎಂಬ ಮಾತಿದೆ. ಇಬ್ಬರ ಜಗಳದಲ್ಲಿ ಮಕ್ಕಳಿಬ್ಬರು ಆನಾಥರಾಗಿದ್ದಾರೆ.

Comments are closed.