
ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಯೊಬ್ಬರು ಕಿಸ್ ಮಾಡಿ ಓಡಿ ಹೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ರಶ್ಮಿಕಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುವಾಗ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಮನವಿ ಮಾಡಿದ್ದಾನೆ. ಅಭಿಮಾನಿಯ ಮನಸ್ಸಿಗೆ ನೋವು ಮಾಡದೇ ರಶ್ಮಿಕಾ ಸೆಲ್ಫಿಗೆ ಪೋಸ್ ಕೂಡ ಕೊಟ್ಟಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿದ ಬಳಿಕ ಅಭಿಮಾನಿ ರಶ್ಮಿಕಾಗೆ ಮುತ್ತು ಕೊಟ್ಟು ಓಡಿ ಹೋಗಿದ್ದಾನೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸದ್ಯ ಈ ಘಟನೆ ಎಲ್ಲಿ ಹಾಗೂ ಯಾವಾಗ ನಡೆದಿದ್ದು ಎಂಬುದು ತಿಳಿದು ಬಂದಿಲ್ಲ. ಆದರೆ ಅಭಿಮಾನಿ ರಶ್ಮಿಕಾಗೆ ಮುತ್ತು ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನೂ ಈ ಕಾರ್ಯಕ್ರಮದ ಆಯೋಜನರು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೆ ರಶ್ಮಿಕಾ ಮತ್ತು ನಿತಿನ್ ಮಾಧ್ಯಮಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ನಿರೂಪಕಿ ಹೀರೋಯಿನ್ ಆಗುವ ಮೊದಲು ಮತ್ತು ನಂತರ ನಿಮಗೆ ಪ್ರೇಮಿಗಳ ದಿನ ಹೇಗೆ ಅನ್ನಿಸುತ್ತದೆ ಎಂದು ಪ್ರಶ್ನೆ ಮಾಡಿದ್ದರು.
ನಿರೂಪಕಿಯ ಪ್ರಶ್ನೆಗೆ ರಶ್ಮಿಕಾ, ನನಗೆ ವ್ಯಾಲೆಂಟೈನ್ಸ್ ಡೇ ಎಂದರೆ ಇಷ್ಟ ಇಲ್ಲ. ಪ್ರೇಮಿಗಳು ಕೈ ಕೈ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ಕೋಪ ಬರುತ್ತೆ. ಅದರಲ್ಲೂ ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ನೋಡಿದರೆ ಕಲ್ಲಲ್ಲಿ ಹೊಡಿಯಬೇಕು ಎನ್ನಿಸುತ್ತದೆ. ಯಾಕೆ ಎಂದು ಗೊತ್ತಿಲ್ಲ ಎಂದು ಹೇಳಿದ್ದರು.
Comments are closed.