ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಸೋಮವಾರ ಶ್ರೀ ಮಹಾ ವಿಷ್ಣು ಯಾಗ ಪ್ರಾರಂಭಗೊಂಡಿತು . ಲೋಕ ಕಲ್ಯಾಣಾರ್ಥವಾಗಿ ಕೊಂಚಾಡಿ ಶ್ರೀ ಕಾಶೀಮಠದಲ್ಲಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸೋಮವಾರ ಶ್ರೀ ಮಹಾ ವಿಷ್ಣು ಯಾಗ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮುಖಾಂತರ ವಿಧ್ಯುಕ್ತವಾಗಿ ಪ್ರಾರಂಭ ಗೊಂಡಿತು.
ಪ್ರಾರಂಭದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ವನಿತಾ ಅಚ್ಚುತ್ ಪೈ ಸಭಾಂಗಣದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಸಕಲ ಬಿರುದು ಬಾವಳಿ ಗಳಿಂದ ಯಜ್ಞ ಮಂಟಪಕ್ಕೆ ಕರೆತರಲಾಯಿತು.
ಭವ್ಯವಾಗಿ ನಿರ್ಮಿಸಲಾದ ಯಜ್ಞ ಮಂಟಪದಲ್ಲಿ ಶ್ರೀಗಳವರು ದೀಪ ಪ್ರಜ್ವಲನೆ ನಡೆಸಿದರು ಬಳಿಕ ಶ್ರೀಗಳವರ ಅಗ್ರ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ನಡೆಯಿತು.
ವಿವಿಧ ಕ್ಷೇತ್ರಗಳಿಂದ ಆಗಮಿಸಿದ ನಾನಾ ಗೋತ್ರೆ ಯ ವೈಧಿಕರಿಂದ ಯಜ್ಞ ಮಂಟಪದಲ್ಲಿ ಯಜ್ಞ ಪ್ರಾರಂಭವಾಯಿತು, ಮಧ್ಯಾಹ್ನ ಲಘು ಪೂರ್ಣಆಹುತಿ ಬಳಿಕ ಸಮಾರಾಧನೆ ನಡೆಯಿತು . ಈ ಮಹಾ ಯಾಗವು ಮೂರುದಿನಗಳ ಪರ್ಯಂತ ನಡೆಯಲಿದ್ದು ಮೂರನೇ ದಿನ ದಂದು ಶ್ರೀ ಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪೂರ್ಣಆಹುತಿ ನಡೆಯಲಿರುವುದು .
ಚಿತ್ರ : ಮಂಜು ನೀರೇಶ್ವಾಲ್ಯ




Comments are closed.