ಕ್ರೀಡೆ

ಮೊಹಮ್ಮದ್​ ಶಮಿ ವಿರುದ್ಧ ಮುಸ್ಲಿಂ ಸಂಪ್ರದಾಯವಾದಿಗಳು ಗರಂ

Pinterest LinkedIn Tumblr


ಮುಂಬೈ: ಭಾರತ ಕ್ರಿಕೆಟ್​ ತಂಡದ ವೇಗದ ಬೌಲರ್ ಮೊಹಮ್ಮದ್​ ಶಮಿ ಅವರ ಇನ್ಸ್ಟಾಗ್ರಾಂ ಪೋಸ್ಟ್​ವೊಂದು ವೈರಲ್ ಆಗಿದೆ. ಅದಕ್ಕೆ ಪರ-ವಿರೋಧ ಕಾಮೆಂಟ್​ಗಳು ಬರುತ್ತಿವೆ.

ಈ ಹಿಂದೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಶಮಿ ಅವರನ್ನು ಕೈಬಿಡಲಾಗಿತ್ತು. 2018ರಲ್ಲಿ ತಂಡಕ್ಕೆ ಮರಳಿದ ಮೊಹಮ್ಮದ್​ ಶಮಿ ಅಂದಿನಿಂದಲೂ ತಿರುಗಿ ನೋಡಿಲ್ಲ. ತಂಡಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯ ಮೂರು ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದರು.

ಈಗ ಮೊಹಮ್ಮದ್​ ಶಮಿ ಅವರು ತಮ್ಮ ಪುತ್ರಿಯ ಸುಂದರವಾದ ಫೋಟೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪುಟ್ಟ ಬಾಲಕಿ ಹಳದಿ, ಕೆಂಪು ಮಿಶ್ರಿತ ಬಣ್ಣದ ಸೀರೆಯನ್ನುಟ್ಟು, ಹಣೆಗೆ ಕುಂಕುಮವನ್ನಿಟ್ಟು ಹಿಂದು ಸಂಪ್ರದಾಯದಲ್ಲಿ ಕಂಗೊಳಿಸುತ್ತಿದ್ದಾಳೆ.

ಇದು ಸರಸ್ವತಿ ಪೂಜೆಯಲ್ಲಿ ತೆಗೆದ ಫೋಟೋ ಎನ್ನಲಾಗಿದೆ. ಬಾಲಕಿಯ ಹಿಂದೆ ಪೂಜಾ ಪೆಂಡಾಲ್​ ಇರುವುದನ್ನು ಗಮನಿಸಬಹುದು. ಫೋಟೋವನ್ನು ಪೋಸ್ಟ್ ಮಾಡಿದ ಶಮಿ, ತುಂಬ ಚೆನ್ನಾಗಿ ಕಾಣಿಸುತ್ತಿದ್ದೀಯಾ ಪುಟ್ಟಾ, ದೇವರು ನಿನಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.

ಆದರೆ ಈ ಪೋಸ್ಟ್ ಎಷ್ಟು ಮೆಚ್ಚುಗೆಯನ್ನು ಪಡೆದಿದೆಯೋ ಅಷ್ಟೇ ವಿರೋಧವನ್ನು ಎದುರಿಸಿದೆ. ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹಲವು ಸಂಪ್ರದಾಯವಾದಿಗಳು ಶಮಿ ವಿರುದ್ಧ ಅಸಹ್ಯಕರ ಕಾಮೆಂಟ್​ಗಳನ್ನು ಹಾಕಿದ್ದಾರೆ. ನೀನು ಮುಸ್ಲಿಂ ಎಂಬುದನ್ನು ಮರೆಯಬೇಡ ಎಂದು ಎಚ್ಚರಿಸಿದ್ದಾರೆ.

ಹಾಗೇ ಮೊಹಮ್ಮದ್​ ಶಮಿಯ ಅಭಿಮಾನಿಗಳು ಪೋಸ್ಟ್​ನ್ನು ಹೊಗಳಿದ್ದಾರೆ. ಶಮಿ ನಿಜವಾದ ಭಾರತೀಯ ಎಂದು ಕಾಮೆಂಟ್​ಗಳನ್ನು ಹಾಕಿದ್ದಾರೆ. ಮುದ್ದು ಹುಡುಗಿ ಎಂದು ಹೇಳಿದ್ದಾರೆ.

Comments are closed.