
ಮಹಾರಾಷ್ಟ್ರ: ಸಹಪಾಠಿಗಳು ಮತ್ತು ಹಾಸ್ಟೆಲ್ ಸಿಬ್ಬಂದಿ 18 ವರ್ಷದ ಬಾಲಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣ ಆತ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಪುರ್ ಜಿಲ್ಲೆಯಲ್ಲಿ ನಡೆದಿದೆ.
12 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮರಾಯಿ ಪಠಾಣ್ ಬಳಿಯಿರುವ ಜಿವತಿ ಟೆಹ್ಸಿಲ್ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದ. ಇಲ್ಲಿ ತನಗೆ ಹಾಸ್ಟೆಲ್ ನಲ್ಲಿರುವ ಮೂವರು ಸಿಬ್ಬಂದಿಗಳು, ಮತ್ತು ಇತರ ಸಹಪಾಠಿಗಳಿಂದ ನಿರಂತರವಾಗಿ ಲೈಂಗಿಕವಾಗಿ ದೌರ್ಜನ್ಯವಾಗುತ್ತಿತ್ತು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಪೊಲೀಸರು ಈ ಪುಸ್ತಕವೊಂದನ್ನು ವಶಪಡಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಉಪ ವಿಭಾಗದ ಪೊಲೀಸ್ ಅಧಿಕಾರಿ ಶಿಲ್ವಂತ್ ನಂದೇಡ್ ಕರ್ ಐಪಿಸಿ ಸೆಕ್ಸನ್ 377, ಪೋಕ್ಸೋ ಕಾಯ್ದೆಯಡಿಯಲ್ಲಿ 14 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ 11 ವಿದ್ಯಾರ್ಥಿಗಳು ಸೇರಿದ್ದಾರೆಂದು ತಿಳಿಸಿದರು.
Comments are closed.