ರಾಷ್ಟ್ರೀಯ

ದೀಪಿಕಾ ಪಡುಕೋಣೆ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎತ್ತಿದ ಪ್ರಶ್ನೆ ಏನು ಗೊತ್ತೇ…?

Pinterest LinkedIn Tumblr

ಸಂಬಾಲ್ಪುರ್: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ನಿಲುವೇನು, ದೇಶದ ಹಿತಾಸಕ್ತಿಯೇ ಅಥವಾ ದೇಶ ವಿಭಜನಯೇ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

ಪ್ರತಿಭಟನೆಗೆ ಬೆಂಬಲ ನೀಡುವ ಸೆಲೆಬ್ರಿಟಿಗಳಲ್ಲಿ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ, ಜೆಎನ್ ಯು ಕ್ಯಾಂಪಸ್ ಗೆ ನಿಮ್ಮ ಭೇಟಿ ದೇಶದ ಮೇಲಿನ ಕಾಳಜಿಯಿಂದಲೇ ಅಥವಾ ದೇಶವನ್ನು ಇಬ್ಘಾಗ ಮಾಡಬೇಕೆಂದೇ ಎಂದು ಕೇಳಿದ್ದಾರೆ.

ಕಳೆದ ಜನವರಿ 7ರಂದು ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ದೀಪಿಕಾ ಪಡುಕೋಣೆ ಹೋಗಿ ಬೆಂಬಲ ನೀಡಿದ್ದರು. ದೀಪಿಕಾ ಪಡುಕೋಣೆ ಭೇಟಿಗೆ ದೇಶಾದ್ಯಂತ ಪರ ವಿರೋಧ ಅಭಿಪ್ರಾಯ, ಚರ್ಚೆಗಳು ಕೇಳಿಬಂದವು.
ಆದರೆ ಪ್ರತಿಭಟನೆ ವೇಳೆ ದೀಪಿಕಾ ಪಡುಕೋಣೆ ಮಾತನಾಡುವುದಾಗಲಿ, ಘೋಷಣೆ ಕೂಗುವುದಾಗಲಿ ಏನೂ ಮಾಡಿರಲಿಲ್ಲ.

Comments are closed.