ಕರಾವಳಿ

55 ನೇ ಸೇವಾ ಯಜ್ಞವನ್ನು ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್

Pinterest LinkedIn Tumblr
ಉಡುಪಿ: ನೊಂದ ದೇವಾಡಿಗರ ಸೇವೆಯೇ ದೇವರ ಸೇವೆ ಎನ್ನುವ ಮೂಲ ಉದ್ದೇಶ ಮತ್ತು ಸೇವಾಕಾರ್ಯವೇ ಮೂಲ ಮಂತ್ರವೆಂದು ಹುಟ್ಟಿಕೊಂಡ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ( ಜಾಗತಿಕ ಬಳಗ ) ಸ್ಥಾಪನೆಗೊಂಡ ಒಂದೂವರೇ ವರ್ಷದ ಒಳಗೇ ಡಿಸೆಂಬರ್ ತಿಂಗಳಲ್ಲಿ ತನ್ನ 55 ನೇ ಸೇವಾಕಾರ್ಯವನ್ನು ಮುಗಿಸಿ ದೇವಾಡಿಗ ಸಮಾಜದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿದೆ.
2019 ಡಿ.15 ರಂದು ಕಾರ್ಕಳ ತಾಲೂಕು ಕಣಜಾರು ಎಂಬಲ್ಲಿಗೆ ತೆರಳಿ ಅಲ್ಲಿ ದವಡೇ ಕರ್ಕರೋಗದಿಂದ ಬಳಲುತ್ತಿರುವ ಚಂದು ದೇವಾಡಿಗರಿಗೆ ರೂ 18 ಸಾವಿರ ವೈದ್ಯಕೀಯ ಸಹಾಯ ಧನ ಹಸ್ತಾಂತರಿಸಲಾಯಿತು. ಅದೇ ದಿನ ಕಾರ್ಕಳ ತಾಲೂಕು ನಿಂಜೂರು ಪಳ್ಳಿ ಗ್ರಾಮಕ್ಕೇ ತೆರಳಿ ಕಿಡ್ನಿ ಸಮಸ್ಯೆ ಪೀಡಿತ ಸುರೇಶ ದೇವಾಡಿಗರಿಗೇ ರೂ 25 ಸಾವಿರ ವೈದ್ಯಕೀಯ ಸಹಾಯ ಧನ ಹಸ್ತಾಂತರಿಸಲಾಯಿತು. ಡಿ. 21 ರಂದು ಕುಂದಾಪುರ ತಾಲೂಕಿನ ಅಂಕದಕಟ್ಟೆಯಲ್ಲಿ ಇತ್ತೀಚೇಗೇ ಹೇರಿಗೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಸುಜಾತಳ ಮನೆಯವರಿಗೆ 20 ಸಾವಿರ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಆಲೂರು ನಿವಾಸಿ ಆನಂದ ದೇವಾಡಿಗರಿಗರು ಚಿಕಿತ್ಸೆ ಪಡೆಯುತಿದ್ದ ಕುಂದಾಪುರ ಆದರ್ಶ ಆಸ್ಪತ್ರೆಗೆ ಡಿ.29 ರಂದು ತೆರಳಿ ರೂ 10,000 ತುರ್ತು ಆರ್ಥಿಕ ಸಹಾಯ ನೀಡಿ 55 ನೇ ಸೇವಾ ಯಜ್ಞವನ್ನು ಪೂರೈಸಿತು.
ಒಟ್ಟಾರೆಯಾಗಿ ಬಳಗದ ತನು ಮನ ಧನದ ಸಹಕಾರದಿಂದ ಫೌಂಡೇಶನ್ 73ಸಾವಿರ ಹಣವನ್ನು ನೊಂದವರಿಗೆ ನೀಡುವ ಮೂಲಕ ನೊಂದ ದೇವಾಡಿಗರ ಜತೆ ಯಾವಾಗಲೂ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಇದೇ ಎನ್ನುವ ಸಂದೇಶ ನೀಡಿದೆ. ಈ ಸೇವಾ ಯಜ್ಣಗಳಲ್ಲಿ ಅಶೋಕ ದೇವಾಡಿಗ ಮುಂಬೈ ಸೇವಾದಾರರಾದ ಯಾದವ ದೇವಾಡಿಗ ಕೆ.ಜಿ. ರೋಡ್, ಶಂಕರ ಅಂಕದಕಟ್ಟೆ, ಸತೀಶ ದೇವಾಡಿಗ ಕಾರ್ಕಡ, ಮಹೇಂದ್ರ ದೇವಾಡಿಗ ಸಾಲಿಗ್ರಾಮ , ನಾರಾಯಣ ರಾವ್ ಹೊಸಾಳ, ರಾಮ ದೇವಾಡಿಗ ಬೈಂದೂರು, ಪುರುಷೋತ್ತಮ ದಾಸ್ ಉಪ್ಪುಂದ, ಮಹಾಲಿಂಗ ದೇವಾಡಿಗ ಬೈಂದೂರು, ಮೋಹನ್ ದೇವಾಡಿಗ ಕೊಂಕಣರೈಲ್ವೇ , ನಾಗೇಂದ್ರ ದೇವಾಡಿಗ ಬೀಜುರು, ದಿನೇಶ ದೇವಾಡಿಗ ಕುಂದಾಪುರ, ಚಂದ್ರ ದೇವಾಡಿಗ ನಾಯ್ಕನಕಟ್ಟೆ ,ಅಭಿಷೇಕ ಆಲೂರು, ರಾಘವೇಂದ್ರ ದೇವಾಡಿಗ ದೊಡ್ಡೋಣಿ ಉಪಸ್ಥಿತರಿದ್ದರು.

Chat Conversation End

Comments are closed.