
ಪೇಜಾವರ ಶ್ರೀಗಳು ಬಾಲ್ಯದಲ್ಲಿ ತನ್ನ ಪೂರ್ವಾಶ್ರಮ ಎರೆಟಾಡಿಯಲ್ಲಿರುವಾಗ ನಡೆದ ಘಟನೆ. ಶ್ರೀಗಳು ಆಗ ವೆಂಕಟರಮಣ ಆಗಿದ್ದರು. ಐದು ವರ್ಷದ ಬಾಲಕ; ಮನೆಯಾಳು ಚೋಮ ಮುಗೇರ ಮನೆಯ ಪಕ್ಕದ ಹಳ್ಳದ ಬದುವಿಗೆ ಕಲ್ಲುಕಟ್ಟುತ್ತಿದ್ದರು. ಬಾಲಕ ವೆಂಕಟರಮಣ ಆಟವಾಡುತ್ತಾ ಚೋಮನ ಕೆಲಸ ನೋಡಲು ಹೋದರು. ಇದನ್ನು ಮನೆಯವರು ಯಾರೂ ಗಮನಿಸಿರಲಿಲ್ಲ.
ಮನೆಯಿಂದ ಹೊರಗೆ ಆಟವಾಡುತ್ತಾ ಹೋದ ವೆಂಕಟರಮಣ ಪಕ್ಕದ ತುಂಬು ನೀರಿನ ಕೆರೆಗೆ ಬಿದ್ದರು. ಅನತಿ ದೂರದಲ್ಲಿದ್ದ ಚೋಮನಿಗೆ ಶಬ್ಧ ಕೇಳಿ ಕೆರೆಯ ಹತ್ತಿರ ಬಂದಾಗ ಬಾಲಕ ಕೆರೆಯಲ್ಲಿ ಮುಳಗೇಳುತ್ತಿರುವುದು ಕಂಡು ಬಂತು, ತಕ್ಷಣ ಬೊಬ್ಬೆ ಹೊಡೆಯುತ್ತಾ ಮನೆಯ ಕಡೆ ಓಡಿದರು. ಪುಣ್ಯಕ್ಕೆ ಅಲ್ಲಿ ವೆಂಕಟರಮಣರ ತಂದೆ ನಾರಾಯಣ ಆಚಾರ್ಯ ಮನೆಯಲ್ಲಿದ್ದರು. ತಕ್ಷಣ ಧಾವಿಸಿ ಬಾಲಕನನ್ನು ರಕ್ಷಿಸಿದರು.
ಅಂದು ಚೋಮ ಕೆರೆಯ ಹತ್ತಿರ ಇಲ್ಲದೇ ಇರುತ್ತಿದ್ದರೆ ಇಂದು ನಾವು ಒಬ್ಬ ವಿಶ್ವಗುರು ಶ್ರೀಗಳನ್ನು ಕಾಣಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಊರಿನ ಜನತೆ ಹೇಳುತ್ತಾರೆ. ಈ ಘಟನೆಯನ್ನು ಸ್ವತಃ ಶ್ರೀಗಳು ನೆನಪಿನಲ್ಲಿಟ್ಟುಕೊಂಡು ಅವರು ಎರೆಟಾಡಿಗೆ ಬರುವಾಗ ಚೋಮನ ವಂಶಸ್ಥರನ್ನು ಕರೆದು ಮಾತನಾಡಿಸುತ್ತಿದ್ದರು.
Comments are closed.