
ಕುಂದಾಪುರ: ಮೆಕ್ಕಾ ಮಸೀದಿ ಹಾಗೂ ಸೌದಿ ಅರೇಬಿಯಾದ ದೊರೆ ಕುರಿತು ಫೇಸ್ ಬುಕ್ ನಲ್ಲಿ ಕುಂದಾಪುರ ಕೋಟೇಶ್ವರ ಮೂಲದ ಹರೀಶ್ ಎಂಬುವರ ಹೆಸರಲ್ಲಿ ಯಾರೋ ಒಬ್ಬ ಕಿಡಿಗೇಡಿ ನಕಲಿ ಖಾತೆ ತೆರೆದು ನಿಂದನಾತ್ಮಕ ಬರಹ ಬರೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಈಗ ಹರೀಶ್ ಅವರು ತಾನು ನಿರ್ವಹಿಸುತ್ತಿದ್ದ ಕೆಲಸದ ಸ್ಥಳದಲ್ಲಿ ಹಾಗೂ ಅಲ್ಲಿನ ಪೊಲೀಸರಿಂದ ವಿಚಾರಣೆ ಎದುರಿಸಬೇಕಾಗಿದೆ ಬಂದಿದೆ.
ಗಲ್ಫ್ ರಾಷ್ಟ್ರದ ದಮನ್ನ ಕಂಪೆನಿಯಲ್ಲಿ ಎಸಿ ಮೆಕಾನಿಕ್ ಆಗಿದ್ದ ಹರೀಶ್ ಅವರು ಎರಡು ದಿನದ ಹಿಂದೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವನ್ನು ಹಾಗೂ ಈ ಪೌರತ್ವ ಕಾಯ್ದೆ ಕುರಿತಂತೆ ತನ್ನ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ಈತನನ್ನು ಮೊದಲಿಗೆ ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದ್ದು, ಈ ಬಗ್ಗೆ ಆತ ಬಹಿರಂಗ ಕ್ಷಮೆ ಕೇಳಿದ ನಂತರ ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದು,ಆ ವಿಚಾರ ಅಲ್ಲಿಗೆ ಅಂತ್ಯ ಕಂಡಿತ್ತು.
ಆದರೆ ಈ ಮಧ್ಯೆ ಇವರ ಹೆಸರಿನಲ್ಲಿ ಬೇರೆಯವರು ಯಾರೋ ನಕಲಿ ಖಾತೆ ತೆರೆದು ಅದರಲ್ಲಿ ಅಲ್ಲಿನ ರಾಜ, ಮೆಕ್ಕಾ ಬಗ್ಗೆ ನಿಂದನಾತ್ಮಕ ಬರಹ ಬರೆದು ಹಾಕಿದ್ದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದ್ದು, ಇದರಿಂದ ಹರೀಶ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
Comments are closed.