
ದೇಶದಲ್ಲಿ ಹೈದರಾಬಾದಿಗೆ ತನ್ನದೇ ಆದ ಒಂದು ಗುರುತು ಹಾಗೂ ಸ್ಥಾನ ಇದೆ. ಇಂತಹ ನಗರದಲ್ಲಿ ಆಗಾಗ ಕೆಲ ಕಹಿ ಗಟನೆಗಳೂ ನಡೆಯುತ್ತಿರುತ್ತವೆ. ಅವುಗಳಲ್ಲಿ ವೇಶ್ಯಾವಾಟಿಕೆ ಜಾಲಗಳು ಮಾಡುವ ಕೆಟ್ಟ ಕೆಲಸವೂ ಒಂದು.
ಹೌದು, ಹೈದರಾಬಾದಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲಪೊಂದು ಪತ್ತೆಯಾಗಿದೆ. ಇತ್ತೀಚೆಗಷ್ಟೆ ಬೇಗಂಪೇಟೆಯಲ್ಲಿ ಇಂತಹದ್ದೇ ಒಂದು ಜಾಲವನ್ನು ಪೊಲೀಸರು ಭೇದಿಸಿದ್ದರು.
ಬೇಗಂ ಪೇಟೆಯ ಒಂದು ಪಬ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿ, ಬಂಧಿಸಿದ್ದರು. ಈಗ ಬಂಜಾರಹಿಲ್ಸ್ನಲ್ಲಿರುವ ಹೋಟೆಲ್ ಒಂದರಲ್ಲಿ ಈ ಜಾಲ ಪತ್ತೆಯಾಗಿದೆ.
ಹೋಟೆಲ್ನಲ್ಲಿ ಸ್ಟಾರ್ ನಟಿಯೊಬ್ಬರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನಟಿಯನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಾಲಿವುಡ್ನ ಕೆಲವು ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ನಟಿಯೊಂದಿಗೆ ಧಾರಾವಾಹಿಗಳಲ್ಲಿ ನಟಿಸುವ ಕಲಾವಿದೆ ಹಾಗೂ ಇವೆಂಟ್ ಮ್ಯಾನೇಜರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಇದೇ ರೀತಿಯ ಜಾಲ ನಡೆಸುತ್ತಿದ್ದ ಟಾಲಿವುಡ್ ನಟಿಯನ್ನೂ ಪೊಲೀಸರು ಬಂಧಿಸಿದ್ದರು. ಸಿನಿಮಾಗಳಲ್ಲಿ ಮಿಂಚಲು ಬರುವ ಉದಯೋನ್ಮುಖ ನಟಿಯರಿಗೆ ಬಲೆ ಬೀಸಿ ಈ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆಯಂತೆ. ಸದ್ಯ ವಶಕ್ಕೆ ತೆಗೆದುಕೊಂಡಿರುವ ನಟಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
Comments are closed.