ಉಡುಪಿ: ದೂರುದಾರ ಮತ್ತು ನಾಲ್ಕು ಮಂದಿ ಸಾಕ್ಷಿದಾರರಿಗೆ ಗಂಭೀರ ಹಾಗೂ ಸಾಧಾರಣ ಗಾಯ ಪಡಿಸಿದ ಆರೋಪಿತರಿಗೆ ಉಡುಪಿಯ 1ನೇ ಹೆಚ್ಚುವರಿ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶವನ್ನು ಹೊರಡಿಸಿದೆ.

ಉಡುಪಿ ತಾಲೂಕು ಚೇರ್ಕಾಡಿಯ ಹರ್ಷವರ್ದನ ಹೆಗ್ಡೆ ಹಾಗೂ ಸದಾಶಿವ ಹೆಗ್ಡೆ ಆರೋಪಿಗಳಾಗಿದ್ದು ಇವರಿಗೆ ಐಪಿಸಿ ಸೆಕ್ಷನ್ 326 ಅಡಿಯಲ್ಲಿ 1 ವರ್ಷದವರೆಗಿನ ಶಿಕ್ಷೆ ಹಾಗೂ ತಲಾ ರೂ.5,000 ನಂತೆ ದಂಡವನ್ನು ಹಾಗೂ ಐಪಿಸಿ ಸೆಕ್ಷನ್ 324 ಅಡಿ. 6 ತಿಂಗಳುಗಳ ಶಿಕ್ಷೆ ಹಾಗೂ ತಲಾ ರೂ. 5,000 ದಂಡ ವಿಧಿಸಿ ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಎಂ.ಎಸ್. ಆದೇಶಿಸಿದ್ದಾರೆ. ದಂಡದ ಹಣದಿಂದ ನೊಂದ ಗಾಯಾಳುಗಳಿಗೆ ತಲಾ ರೂ. 3,000 ದಂತೆ ಪರಿಹಾರ ನೀಡುವಂತೆಯೂ ಆದೇಶ ಹೊರಡಿಸಿರುತ್ತಾರೆ.
ಇದು ನ್ಯಾಯಾಲಯದ ಅತೀ ಹಳೆಯ ಪ್ರಕರಣವಾಗಿದ್ದು, ಅಂದಿನ ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಶ್ರೀನಿವಾಸ್ ರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್. ಎನ್. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.