
ನವದೆಹಲಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೋಷಿ ಎಂದು ಇಲ್ಲಿನ ತೀಸ್ ಹಜಾರಿ ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಬಿಜೆಪಿಯ ಮಾಜೀ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲವು ಡಿಸೆಂಬರ್ 20ರಂದು ಘೋಷಿಸಲಿದೆ.
ಈ ಪ್ರಕರಣದಲ್ಲಿ ಸೋಮವಾರವಷ್ಟೇ ಕುಲದೀಪ್ ಅವರನ್ನು ದೋಷಿ ಎಂದು ನ್ಯಾಯಾಲಯವು ಘೋಷಿಸಿತ್ತು.
ಸೆಂಗಾರ್ ಅವರು 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ನಾಮಪತ್ರವನವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಲಯವು ಸೆಂಗಾರ್ ಅವರನ್ನು ಪ್ರತಿನಿದಿಸುತ್ತಿರುವ ವಕೀಲರಿಗೆ ಇಂದು ಸೂಚನೆಯನ್ನು ನೀಡಿತು.
Comments are closed.