ಬೆಂಗಳೂರು: ತಿಂಗಳಿಗೆ ಎರಡು ಶನಿವಾರ ಸೇರಿ ನಾಲ್ಕು ಭಾನುವಾರಗಳ ರಜೆ ಅನುಭವಿಸುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲಾಗಿತ್ತು. ಆದರೆ ಹೊಸತಾಗಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ತಿಂಗಳ ಎರಡನೇ ಶನಿವಾರ ಮಾತ್ರವೇ ಸರ್ಕಾರಿ ರಜೆ ಇರಲಿದೆ. ನಾಲ್ಕನೇ ಶನಿವಾರ ಮಾಮೂಲಿನಂತೆ ಉದ್ಯೋಗ ಮಾಡಬೇಕಾಗಿದೆ.
2019 ನೇ ಸಾಲಿಗೆ ಮಂಜೂರು ಮಾಡಲಾಗಿರುವ ರಜಾದಿನಗಳ ಅಧಿಸೂಚನೆ ಅನ್ವಯ ನಾಲ್ಕನೇ ಶನಿವಾರ ರಜೆ ಎಂದು ಹೇಳಲಾಗಿತ್ತು. ಆದರೆ ಹೊಸ ಸುತ್ತೋಲೆಯಂತೆ ನಾಲ್ಕನೇ ಶನಿವಾರದ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.
ಮೊದಲಿಗೆ ಆದೇಶದಂತೆ ತಿಂಗಳಿಗೆ ಆರು ದಿನಗಳ ರಜೆ ಅನುಭವಿಸುತ್ತಿದ್ದ ಸರ್ಕಾರಿ ನೌಕರರು, ಇನ್ನು ಮುಂದೆ ಐದು ರಜೆಗಳನ್ನು ಮಾತ್ರವೇ ಅನುಭವಿಸಲಿದ್ದಾರೆ.

Comments are closed.