
ಥಾಣೆ: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಗಂಡನೇ ಹೆಂಡತಿಯನ್ನು ಕೊಂದು 1 ವಾರಗಳ ಕಾಲ ಫ್ರಿಜ್ನಲ್ಲಿಟ್ಟು ನಂತರ ಕಾಲುವುಗೆ ಬಿಸಾಡಿದ ಘಟನೆ ಬೆಚ್ಚಿ ಬೀಳಿಸಿತ್ತು. ಅದರ ಬೆನ್ನಲ್ಲೇ ಮಹಾರಾಷ್ಟ್ರದ ಥಾಣೆಯಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದ್ದು, ತಂದೆಯೇ ಮಗಳನ್ನು ಹತ್ಯೆ ಮಾಡಿ ಆಕೆಯ ಕುತ್ತಿಗೆಯ ಕೆಳಗಿನ ಭಾಗವನ್ನು ತುಂಡು ಮಾಡಿ ಚೀಲದಲ್ಲಿ ತುಂಬಿಟ್ಟ ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಕಲ್ಯಾಣ್ನಲ್ಲಿ ಚೀಲವೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಆ ದೇಹದ ತಲೆಯ ಭಾಗ ಮಾತ್ರ ನಾಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೃತಪಟ್ಟ ಯುವತಿಯ ತಂದೆಯೇ ಆರೋಪಿ ಎಂದು ಆತನನ್ನು ಬಂಧಿಸಿದ್ದಾರೆ.
ಆಟೋರಿಕ್ಷಾ ಚಾಲಕನೊಬ್ಬ ಪೊಲೀಸರಿಗೆ ಫೋನ್ ಮಾಡಿ ತನ್ನ ಆಟೋದಲ್ಲಿ ಒಂದು ಬ್ಯಾಗ್ ಇದೆ. ಅದರಿಂದ ತುಂಬ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದ. ಆಟೋವನ್ನು ತಪಾಸಣೆ ಮಾಡಿದ ಪೊಲೀಸರು ಆ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಶವ ಇರುವುದು ಗೊತ್ತಾಗಿತ್ತು. ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆ ಚೀಲವನ್ನು ಅಲ್ಲೇ ಬಿಟ್ಟುಹೋಗಿದ್ದ ಎಂಬ ವಿಷಯ ಆಟೋ ಡ್ರೈವರ್ನಿಂದ ಗೊತ್ತಾಗಿತ್ತು. ಆಟೋ ಡ್ರೈವರ್ನಿಂದ ಕೆಟ್ಟ ವಾಸನೆ ಬರುತ್ತಿದ್ದುದರಿಂದ ಪೊಲೀಸರು ತಪಾಸಣೆ ನಡೆಸಿದ್ದರು.
ಆ ಪ್ರಕರಣದ ಬೆನ್ನತ್ತಿದ ಪೊಲೀಸರು ಆಟೋ ಡ್ರೈವರ್ ನೀಡಿದ ಮಾಹಿತಿಯನ್ನು ಆಧರಿಸಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದ್ದರು. ಆಗ ಆ ಬ್ಯಾಗ್ ಹಿಡಿದು ಆಟೋ ಹತ್ತಿದವನು ಯಾರೆಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ತಿತ್ವಾಲದಲ್ಲಿ ನೆಲೆಸಿರುವ 47 ವರ್ಷದ ಅರವಿಂದ್ ತಿವಾರಿ ಎಂಬ ವ್ಯಕ್ತಿಯೇ ತಮ್ಮ ಮಗಳನ್ನು ಕೊಲೆ ಮಾಡಿದವರು ಎಂದು ಗೊತ್ತಾಯಿತು.
ಅರವಿಂದ್ ತಿವಾರಿ ಅವರ 22 ವರ್ಷದ ಮಗಳು ಪ್ರಿನ್ಸಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಆದರೆ, ಆತನ ಜೊತೆ ಆಕೆ ಸುತ್ತಾಡುವುದು ತಿವಾರಿಗೆ ಇಷ್ಟವಿರಲಿಲ್ಲ. ಈ ಬಗ್ಗೆ ಅಪ್ಪ-ಮಗಳ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು. ಮಗಳು ಆತನನ್ನು ಬಿಡಲು ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ಮಾಡಿ ಚೀಲದಲ್ಲಿ ತುಂಬಿ ಆಟೋದಲ್ಲಿ ಸಾಗಿಸಿದ್ದರು. ಆ ಬ್ಯಾಗ್ನಲ್ಲಿ ಯುವತಿಯ ತಲೆಯ ಭಾಗ ಮಾತ್ರ ನಾಪತ್ತೆಯಾಗಿದೆ. ಹೀಗಾಗಿ, ಯುವತಿಯ ಮೃತದೇಹದ ತಲೆ ಮತ್ತು ಕೊಲೆಗೆ ಬಳಸಿದ ಚಾಕುವನ್ನು ಪೊಲೀಸರು ಹುಡುಕುತ್ತಿದ್ದಾರೆ.
Comments are closed.