
ಹೈದರಾಬಾದ್: ಪಶುವೈದ್ಯೆ ದಿಶಾ ಅತ್ಯಾಚಾರ- ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಕೃತ್ಯ ನಡೆದು ಹತ್ತು ದಿನದ ಒಳಗೆ ಆರೋಪಿಗಳ ಎನ್ ಕೌಂಟರ್ ನಡೆದಿದ್ದು, ಇಂದು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಸಂತ್ರಸ್ಥೆಯ ತಂದೆ ಹೇಳಿದ್ದಾರೆ.
ಎನ್ ಕೌಂಟರ್ ನ ಮಾಹಿತಿ ತಿಳಿದು ಮಾತನಾಡಿದ ಅವರು ತೆಲಂಗಾಣ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ಸಂತ್ರಸ್ಥೆ ದಿಶಾಳ ಸಹೋದರಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ನನಗೆ ಬಹಳ ಸಂತೋಷವಾಗಿದೆ. ಪೊಲೀಸರ ಈ ಕೆಲಸ ಒಂದು ಉದಾಹರಣೆಯಾಗಿ ನಿಲ್ಲಲಿದೆ ಎಂದಿದ್ದಾರೆ.
26 ವರ್ಷದ ಪಶುವೈದ್ಯೆಯ ಅತ್ಯಾಚಾರ- ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ 3.30ರ ಸುಮಾರಿಗೆ ಎನ್ ಕೌಂಟರ್ ಮಾಡಲಾಗಿದೆ.
Comments are closed.