
ನವದೆಹಲಿ (ಡಿ.05): ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನಕ್ಕೇರುವ ಮೂಲಕ ಸಾಮಾನ್ಯ ಜನರಲ್ಲಿ ಕಣ್ಣೀರು ತರಿಸುತ್ತಿದೆ. ಶತಕದ ಗಡಿ ದಾಟಿ ಮುನ್ನುಗುತ್ತಿರುವ ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆ ಜನರು ಆಂತಕ ವ್ಯಕ್ತಪಡಿಸುತ್ತಿದ್ದರೆ, ಇತ್ತ ಸಂಸದರು ಈರುಳ್ಳಿ ತಿನ್ನದ ನಮಗೆ ಅದರ ಸಮಸ್ಯೆ ಕಾಡುತ್ತಿಲ್ಲ ಎಂಬ ಉಡಾಫೆ ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿಸಿದ್ದಾರೆ.
ದೇಶದ ಆರ್ಥಿಕತೆ ನಿಯಂತ್ರಿಸುವ ಹಣಕಾಸು ಸಚಿವರು ಈರುಳ್ಳಿ ಬೆಲೆ ಹೆಚ್ಚಳ ಕುರಿತು ಸಂಸತ್ತಿನ ಚರ್ಚೆ ವೇಳೆ ಮಾತನಾಡಿದ ಅವರು ಈರುಳ್ಳಿ ತಿನ್ನದ ಕುಟುಂಬದಿಂದ ಬಂದ ನನಗೆ ಬೆಲೆ ಹೆಚ್ಚಳದ ಬಗ್ಗೆ ಹೇಗೆ ಗೊತ್ತಾಗಬೇಕು ಎಂದು ಟೀಕೆಗೆ ಗುರಿಯಾಗಿದ್ದಾರೆ.
ಇವರ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ನಾಯಕ ಅಶ್ವಿನಿ ಚೌಬೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಶಾಖಾಹಾರಿಯಾದ ನಾನು ಈರುಳ್ಳಿಯನ್ನೇ ತಿನ್ನುವುದಿಲ್ಲ. ನನಗೆ ಹೇಗೆ ಬೆಲೆ ಹೆಚ್ಚಳದ ಬಗ್ಗೆ ತಿಳಿಯಬೇಕು ಎಂದಿದ್ದಾರೆ,
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿರುವ ಚೌಬೆ ಈರುಳ್ಳಿ ದರ ಹೆಚ್ಚಳ ತಮ್ಮಗೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎನ್ನುವ ಮೂಲಕ ಬೆಲೆ ಹೆಚ್ಚಳಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೇ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿರುವ ಅವರು, ಅವರು ಸರಿಯಾದ ಉತ್ತರ ನೀಡಿದ್ದಾರೆ. ಸರ್ಕಾರ ಏನು ಸಹಾಯ ಮಾಡಲು ಸಾಧ್ಯ ಎಂದರು.
Comments are closed.