
ಮೆಲ್ಬೋರ್ನ್: ಏನೋ ಕಸರತ್ತು ಮಾಡಲು ಹೋಗಿ ಯಡವಟ್ಟು ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೂರನೇ ಮಹಡಿಯ ಬಾಲ್ಕನಿಯಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಜೋಡಿ ನಗ್ನವಾಗಿ ಹೊರಗೆ ಉರುಳಿಬಿದ್ದು ಸಾವನ್ನಪ್ಪಿರುವ ಘಟನೆ ಮೆಲ್ಬೊರ್ನ್ ನಲ್ಲಿ ನಡೆದಿದೆ.
ಮೂರನೇ ಮಹಡಿಯ ಮಗ್ಗುಲಿನಲ್ಲಿ ರಾಸಲೀಲೆಯಲ್ಲಿ ತೊಡಗಿದ್ದ 28ರ ಹರೆಯದ ಯುವತಿ ಮತ್ತು 35 ವರ್ಷದ ಪ್ರೇಮಿ ಆಯತಪ್ಪಿ ಉರುಳಿಬಿದ್ದು ಸಾವನ್ನಪ್ಪಿದ್ದರು. ಇಬ್ಬರ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ ಎಂದು ವರದಿ ತಿಳಿಸಿದೆ.
ಭಾರೀ ಸದ್ದಿನ ಹಿನ್ನೆಲೆಯಲ್ಲಿ ಹೊರಗೆ ಬಂದು ನೋಡಿದಾಗ ಇಬ್ಬರ ನಗ್ನ ದೇಹ ಬಿದ್ದಿರುವುದು ಕಂಡು ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆ ಹೇಗೆ ಸಂಭವಿಸಿದೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಾಲ್ ಡೆರೋನ್ ಪೊಲೀಸ್ ಮುಖ್ಯಸ್ಥ ಕ್ರಿಸ್ಥಿಯನ್ ಟ್ರುಜಿಲ್ಲೋ ತಿಳಿಸಿದ್ದಾರೆ.
ಆದರೆ ಸ್ಥಳೀಯ ಪತ್ರಿಕೆ ವರದಿ ಪ್ರಕಾರ, ಈ ಜೋಡಿಗೆ ಬಾಲ್ಕನಿ ಗೋಡೆ ಎಷ್ಟು ಎತ್ತರದಲ್ಲಿದೆ ಎಂಬ ಬಗ್ಗೆ ತಿಳಿದಿರಲಿಲ್ಲವಾಗಿತ್ತು. ಹೀಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ಉರುಳಿ ಕೆಳಗೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಿದೆ.
Comments are closed.